ದಕ್ಷಿಣ ಭಾರತದ ಅತ್ಯಂತ ಬ್ಯುಸಿ ನಟಿ, ಕೈಯಲ್ಲಿವೆ ಎಂಟು ಸಿನಿಮಾಗಳು, ಯಾರೀಕೆ?

12 SEP 2025

By  Manjunatha

ದಕ್ಷಿಣ ಭಾರತದ ಪ್ರಸ್ತುತ ಸ್ಟಾರ್ ನಟಿ ಎಂದರೆ ರಶ್ಮಿಕಾ, ಶ್ರೀಲೀಲಾ ಹೆಸರುಗಳು ಕೇಳಿ ಬರುತ್ತವೆ. ಆದರೆ ಮತ್ತೊಬ್ಬ ನಟಿ ಇದ್ದಾರೆ.

       ಪ್ರಸ್ತುತ ಸ್ಟಾರ್ ನಟಿ

ಮಲಯಾಳಿ ಬೆಡಗಿ ಸಂಯುಕ್ತಾ ಮೆನನ್, ಈಕೆಯ ಕೈಯಲ್ಲಿ ಈಗ ಪ್ರಸ್ತುತ ಬರೋಬ್ಬರಿ ಎಂಟು ಸಿನಿಮಾಗಳು ಇವೆ.

ಬೆಡಗಿ ಸಂಯುಕ್ತಾ ಮೆನನ್

2016 ರಿಂದಲೂ ಚಿತ್ರರಂಗದಲ್ಲಿರುವ ನಟಿ ಸಂಯುಕ್ತಾ ಮೆನನ್ ಕನ್ನಡದ ಹಿಟ್ ಸಿನಿಮಾ ‘ಗಾಳಿಪಟ 2’ನಲ್ಲಿ ನಟಿಸಿದ್ದಾರೆ.

  ‘ಗಾಳಿಪಟ 2’ನಲ್ಲಿ ನಟನೆ

ಸಂಯುಕ್ತಾ ಮೆನನ್ ಕೈಯಲ್ಲಿ ಈಗ ನಾಲ್ಕು ತೆಲುಗು ಸಿನಿಮಾ, ಎರಡು ತಮಿಳು ಹಾಗೂ ಎರಡು ಮಲಯಾಳಂ, ಒಂದು ಹಿಂದಿ ಸಿನಿಮಾ ಇದೆ.

ಎಂಟು ಸಿನಿಮಾ ಕೈಯಲ್ಲಿವೆ

ಬಾಲಯ್ಯ ನಟನೆಯ ‘ಅಖಂಡ 2’, ‘ಸ್ವಯಂಭು’, ‘ನಾರಿ ನಾರಿ ನಡುಮ ಮುರಾರಿ’, ಪುರಿ ಜಗನ್ನಾಥ್ ಅವರ ಹೊಸ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಸಂಯುಕ್ತ.

   ತೆಲುಗಿನ ಸಿನಿಮಾಗಳು

ತಮಿಳಿನಲ್ಲಿ ಲೋಕೇಶ್ ಕನಗರಾಜ್ ನಿರ್ಮಾಣದ ‘ಬೆಂಜ್’, ಹಾಗೂ ಇನ್ನೊಂದು ಹೆಸರಿಡದ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ತಮಿಳಿನ ಸಿನಿಮಾಗಳಿವು  

ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ ‘ರಾಮ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ತಡವಾಗಿದೆ.

    ಮಲಯಾಳಂ ಸಿನಿಮಾ

ಹಿಂದಿಯಲ್ಲಿ ಕಾಜೋಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಮಹರಾಣಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

      ಹಿಂದಿ ಸಿನಿಮಾನಲ್ಲಿ