ತೆಲುಗಿಗೆ ಕಾಲಿಟ್ಟ ಕನ್ನಡತಿ ಸಪ್ತಮಿ ಗೌಡ, ಸಿನಿಮಾ ಯಾವುದು? ಬಿಡುಗಡೆ ಯಾವಾಗ?

12 June 2025

By  Manjunatha

ಕನ್ನಡದ ನಟಿಯರು ಪರಭಾಷೆ ಸಿನಿಮಾಗಳಲ್ಲಿ ನಟಿಸುವುದು ಹೊಸತೇನೂ ಅಲ್ಲ. ಹಲವಾರು ನಟಿಯರು ಈಗಲೂ ಪರಭಾಷೆಯಲ್ಲಿ ನಟಿಸುತ್ತಿದ್ದಾರೆ.

  ಪರಭಾಷೆ ಸಿನಿಮಾಗಳಲ್ಲಿ

ಕನ್ನಡತಿಯರಾದ ರಶ್ಮಿಕಾ ಮಂದಣ್ಣ-ಶ್ರೀಲೀಲಾ ಅಂತೂ ತೆಲುಗು ಚಿತ್ರರಂಗ ಹಾಗೂ ಬಾಲಿವುಡ್​ನಲ್ಲಿ ಬಲು ಬ್ಯುಸಿ.

ರಶ್ಮಿಕಾ-ಶ್ರೀಲೀಲಾ ಕಮಲ್

‘ಕಾಂತಾರ’ ಚೆಲುವೆ ಸಪ್ತಮಿ ಗೌಡ ಸಹ ಪರಭಾಷೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿ ಕೆಲ ಸಮಯ ಆಗಿದೆ.

‘ಕಾಂತಾರ’ ಚೆಲುವೆ ಸಪ್ತಮಿ

ಈ ಹಿಂದೆ ಸಪ್ತಮಿ ಗೌಡ ಅವರು ಬಾಲಿವುಡ್​ನ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾನಲ್ಲಿ ನಟಿಸಿದ್ದರು.

ದಿ ವ್ಯಾಕ್ಸಿನ್ ವಾರ್ ಸಿನಿಮಾ

ಇದೀಗ ಸಪ್ತಮಿ ಗೌಡ ಅವರು ತೆಲುಗಿಗೆ ಕಾಲಿಟ್ಟಿದ್ದು, ಸ್ಟಾರ್ ನಟ ನಿತಿನ್ ನಟನೆಯ ಸಿನಿಮಾನಲ್ಲಿ ನಟಿಸಿದ್ದಾರೆ.

    ತೆಲುಗಿಗೆ ಕಾಲಿಟ್ಟಿದ್ದಾರೆ

ನಿತಿನ್ ನಟನೆಯ ‘ತಮ್ಮುಡು’ ಸಿನಿಮಾನಲ್ಲಿ ಸಪ್ತಮಿ ಗೌಡ ಬಹಳ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ.

  ‘ತಮ್ಮುಡು’ ಸಿನಿಮಾನಲ್ಲಿ

ಸಿನಿಮಾನಲ್ಲಿ ಇಬ್ಬರು ನಾಯಕಿಯರಿದ್ದು ಇಬ್ಬರು ನಾಯಕಿಯರಲ್ಲಿ ಸಪ್ತಮಿ ಗೌಡ ಸಹ ಒಬ್ಬರು.

   ನಾಯಕಿ ಸಪ್ತಮಿ ಗೌಡ

‘ತಮ್ಮುಡು’ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಟ್ರೈಲರ್​ನಲ್ಲಿ ಸಪ್ತಮಿ ಗೌಡ ಪಾತ್ರ ಎದ್ದು ಕಾಣುತ್ತಿದೆ.

   ಪಾತ್ರ ಎದ್ದು ಕಾಣುತ್ತಿದೆ