ಮತ್ತೆ ಕೇದಾರನಾಥಕ್ಕೆ ಭೇಟಿ ನೀಡಿದ ನಟಿ ಸಾರಾ ಅಲಿ ಖಾನ್

22 OCT 2025

By  Manjunatha

ಬಾಲಿವುಡ್ ನಟಿ ಸಾರಾ ಅಲಿ ಖಾನ್, ತಮ್ಮ ಗ್ಲಾಮರ್ ಮತ್ತು ನಟನೆ ಎರಡರಿಂದಲೂ ಸದ್ದು ಮಾಡುತ್ತಿದ್ದಾರೆ.

        ಸಾರಾ ಅಲಿ ಖಾನ್

ಜಾನ್ಹವಿ ಕಪೂರ್ ಅವರಷ್ಟು ದೊಡ್ಡ ಅವಕಾಶಗಳು ಬರುತ್ತಿಲ್ಲವಾದರೂ ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ನಟಿ ಜಾನ್ಹವಿ ಕಪೂರ್

ಇದೀಗ ನಟಿ ಸಾರಾ ಅಲಿ ಖಾನ್ ಮತ್ತೊಮ್ಮೆ ಕೇದಾರನಾಥ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ದೇವರ ದರ್ಶನ ಪಡೆದಿದ್ದಾರೆ.

      ಕೇದಾರನಾಥ ಕ್ಷೇತ್ರ

ಸಾರಾ ಅಲಿ ಖಾನ್​​ಗೂ ಕೇದಾರನಾಥ ಕ್ಷೇತ್ರಕ್ಕೂ ಬಹಳ ಆಪ್ತ ನಂಟು. ವರ್ಷಕ್ಕೆ ಒಂದೆರಡು ಬಾರಿ ಅವರು ಅಲ್ಲಿಗೆ ಹೋಗುತ್ತಾರೆ.

      ಬಹಳ ಆಪ್ತ ನಂಟು

ಸಾರಾ ಅಲಿ ಖಾನ್ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಕೇದಾರ್​​ನಾಥ’ ಅದರ ಶೂಟಿಂಗ್ ಅಲ್ಲಿಯೇ ನಡೆದಿತ್ತು.

ಶೂಟಿಂಗ್ ಅಲ್ಲಿ ನಡೆದಿತ್ತು

ಆಗ ನಟ ಸುಶಾಂತ್ ಸಿಂಗ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು ಸಾರಾ ಅಲಿ ಖಾನ್. ಅವರೊಟ್ಟಿಗೆ ಅದೇ ಕ್ಷೇತ್ರದಲ್ಲಿ ಸುತ್ತಾಡಿದ್ದರು.

ಪ್ರೀತಿಯಲ್ಲಿ ಬಿದ್ದಿದ್ದ ಸಾರಾ

ಹೀಗಾಗಿ ಸಾರಾ ಅಲಿ ಖಾನ್ ಪ್ರತಿ ಬಾರಿಯೂ ಸಹ ಕೇದಾರ ನಾಥ ದೇವಾಲಯಕ್ಕೆ ಹೋಗಿ ಮತ್ತೆ ಅದೇ ಸ್ಥಳಗಳಲ್ಲಿ ಓಡಾಡುತ್ತಾರೆ.

 ಪ್ರತಿ ಬಾರಿ ಭೇಟಿ ನೀಡ್ತಾರೆ

ಇದೀಗ ಮತ್ತೊಮ್ಮೆ ಕೇದಾರನಾಥಕ್ಕೆ ಹೋಗಿದ್ದು, ಆ ಕೇದಾರನಾಥನಿಂದಲೇ ನಾನು ಈಗಿನ ಸ್ಥಿತಿಯಲ್ಲಿ ನಾನಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಸ್ಥಿತಿಯಲ್ಲಿ ನಾನಿದ್ದೇನೆ