ಸೂಪರ್​ಮ್ಯಾನ್ ಭೇಟಿಯಾದ ನಟಿ ಸಾರಾ ಅಲಿ ಖಾನ್

24 June 2026

By  Manjunatha

ಸಾರಾ ಅಲಿ ಖಾನ್ ಬಾಲಿವುಡ್​ನ ಸ್ಟಾರ್ ಯುವನಟಿ, ಹಲವು ಅವಕಾಶಗಳು ಅವರ ಕೈಯಲ್ಲಿವೆ.

       ಸಾರಾ ಅಲಿ ಖಾನ್

ಸೈಫ್ ಅಲಿ ಖಾನ್ ಪುತ್ರಿ ಆಗಿರುವ ಸಾರಾ ಅಲಿ ಖಾನ್, ಖುದ್ದು ಅರಸರ ಮನೆತನಕ್ಕೆ ಸೇರಿದವರು.

   ಸೈಫ್ ಅಲಿ ಖಾನ್ ಪುತ್ರಿ

ಇತ್ತೀಚೆಗೆ ಸಾರಾ ಅಲಿ ಖಾನ್​ ಲಂಡನ್​​ನಲ್ಲಿ ಪ್ರತಿಷ್ಠಿತ ರಾಯಲ್ ಅಸ್ಕಾಟ್ ಕುದುರೆ ರೇಸ್​​ಗೆ ಪ್ರೇಕ್ಷಕರಾಗಿ ಹೋಗಿದ್ದರು.

       ರಾಯಲ್ ಅಸ್ಕಾಟ್

ಬ್ರಿಟೀಷ್ ಮಹಿಳೆಯರಂತೆ ಉಡುಪು ಧರಿಸಿ ಹೋಗಿದ್ದ ಸಾರಾ ಅಲಿ ಖಾನ್, ಅಲ್ಲಿ ಹಲವು ಗಣ್ಯರನ್ನು ಭೇಟಿ ಆಗಿದ್ದಾರೆ.

 ಬ್ರಿಟೀಷ್ ಮಹಿಳೆಯರಂತೆ

ಹಾಲಿವುಡ್​ನ ಸೂಪರ್​ಮ್ಯಾನ್ ಸಿನಿಮಾ ಪಾತ್ರಧಾರಿ ಹೆನ್ರಿ ಕೆವಿಲ್ ಸೇರಿದಂತೆ ಹಲವರನ್ನು ಸಾರಾ ಭೇಟಿ ಆಗಿದ್ದಾರೆ.

        ಸೂಪರ್​ಮ್ಯಾನ್

ರಾಯಲ್ ಅಸ್ಕಾಟ್ ಕುದುರೆ ರೇಸಿಗೆ ಐತಿಹಾಸಿಕ ಹಿನ್ನೆಲೆ ಇದ್ದು, ಇಂಗ್ಲೆಂಡ್​ನ ಹಲವು ಪ್ರತಿಷ್ಠಿತರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾರೆ.

      ಐತಿಹಾಸಿಕ ಹಿನ್ನೆಲೆ

ಸಾರಾ ಅಲಿ ಖಾನ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು, ಹಲವು ಪ್ರಮುಖರನ್ನು ಈ ವೇಳೆ ಭೇಟಿ ಮಾಡಿದ್ದಾರೆ.

        ಪ್ರಮುಖರ ಭೇಟಿ

ಸಾರಾ ಅಲಿ ಖಾನ್ ಪ್ರಸ್ತುತ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಕ್ಷಿಣದ ಒಂದು ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ.

    ಹಿಂದಿ ಸಿನಿಮಾಗಳಲ್ಲಿ