‘ಡೆವಿಲ್’ ಸಿನಿಮಾದ ಪಾತ್ರದ ಬಗ್ಗೆ ನಟಿ ಶರ್ಮಿಳಾ ಮಂಡ್ರೆ ಹೇಳಿದ್ದೇನು?

03 DEC 2025

By  Manjunatha

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾನಲ್ಲಿ ಶರ್ಮಿಳಾ ಮಾಂಡ್ರೆ ಸಹ ಮುಖ್ಯವಾದ ಪಾತ್ರದಲ್ಲಿ ನಟಿಸಲಿದ್ದಾರೆ.

     ‘ಡೆವಿಲ್’ ಸಿನಿಮಾನಲ್ಲಿ

‘ಡೆವಿಲ್’ ಸಿನಿಮಾನಲ್ಲಿ ಅರ್ಚನಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಶರ್ಮಿಳಾ ಅವರು ಮುಖ್ಯ ಪಾತ್ರದಲ್ಲಿದ್ದಾರೆ.

      ಶರ್ಮಿಳಾ ಮಾಂಡ್ರೆ

ಶರ್ಮಿಳಾ ಮಾಂಡ್ರೆ, ದರ್ಶನ್ ಜೊತೆಗೆ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಮೊದಲ ಸಿನಿಮಾ ‘ನವಗ್ರಹ’.

  ಎರಡನೇ ಸಿನಿಮಾ ಇದು

‘ಡೆವಿಲ್’ ಸಿನಿಮಾದ ಪಾತ್ರದ ಬಗ್ಗೆ ಮಾತನಾಡಿರುವ ಶರ್ಮಿಳಾ, ಇದು ಸಣ್ಣ ಪಾತ್ರವಾದರೂ ಬಹಳ ವಿಶೇಷವಾದ ಪಾತ್ರ ಎಂದರು.

       ವಿಶೇಷವಾದ ಪಾತ್ರ

‘ಡೆವಿಲ್’ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ಏನೇನೋ ಸುದ್ದಿಗಳು ಹರಿದಾಡುತ್ತಿವೆ. ಕೆಲವೇ ದಿನಗಳಲ್ಲಿ ನಿಜ ಗೊತ್ತಾಗಲಿದೆ ಎಂದರು ಶರ್ಮಿಳಾ.

       ನಿಜ ಗೊತ್ತಾಗಲಿದೆ

ಸಿನಿಮಾನಲ್ಲಿ ನಾನು ಸುಂದರವಾಗಿ ಕಾಣುವುದು ಮುಖ್ಯವಾಗಿತ್ತು, ನಿರ್ಮಾಪಕಿಯವರೇ ನನಗೆ ಡಿಸೈನ್ ಮಾಡಿಕೊಟ್ಟರು ಎಂದರು.

ಒಳ್ಳೆಯ ಡಿಸೈನರ್ ಉಡುಗೆ

ದರ್ಶನ್ ಜೊತೆಗೆ ‘ನವಗ್ರಹ’ ಸಿನಿಮಾ ಆದ ಮೇಲೆ 18 ವರ್ಷಗಳ ಬಳಿಕ ನಟಿಸಿದ್ದೇನೆ, ಅವರ ಬಗ್ಗೆ ಗೌರವ ಇದೆ ಎಂದಿದ್ದಾರೆ.

       18 ವರ್ಷಗಳ ಬಳಿಕ

ಈ ಸಿನಿಮಾದ ಪ್ರೊಡಕ್ಷನ್ ಇಷ್ಟವಾಯ್ತು, ಎಲ್ಲವೂ ವೃತ್ತಿಪರತೆಯಿಂದ ಕೂಡಿತ್ತು, ಆ ವಾತಾವರಣ ಇಷ್ಟವಾಯ್ತು ಎಂದರು ಶರ್ಮಿಳಾ.

 ಪ್ರೊಡಕ್ಷನ್ ಇಷ್ಟವಾಯ್ತು