17 ವರ್ಷಗಳ ಬಳಿಕ ದರ್ಶನ್ ಜೊತೆ ನಟಿಸುತ್ತಿದ್ದಾರೆ ಶರ್ಮಿಳಾ ಮಾಂಡ್ರೆ

12 June 2025

By  Manjunatha

ಶರ್ಮಿಳಾ ಮಾಂಡ್ರೆ, ಬೆಂಗಳೂರಿನ ಚೆಲುವೆ, ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

  ನಟಿ ಶರ್ಮಿಳಾ ಮಾಂಡ್ರೆ

ಕನ್ನಡದಲ್ಲಿ ಹಲವು ನೆನಪುಳಿಯುವ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಯಶಸ್ವಿ ನಾಯಕಿ ಎನಿಸಿಕೊಂಡಿದ್ದರು.

  ನೆನಪುಳಿಯುವ ಸಿನಿಮಾ

ಆದರೆ 2017 ರ ಬಳಿಕ ಕನ್ನಡ ಚಿತ್ರರಂಗದಿಂದ ಒಮ್ಮೆಲೆ ಕಣ್ಮರೆ ಆಗಿಬಿಟ್ಟರು. ಬಳಿಕ ಬಂದಿದ್ದು 2022ರಲ್ಲಿ ‘ಗಾಳಿಪಟ 2’ ಮೂಲಕ.

ಕಣ್ಮರೆ ಆಗಿಬಿಟ್ಟರು ಶರ್ಮಿ

‘ಗಾಳಿಪಟ 2’ ಬಳಿಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶರ್ಮಿಳಾ ಮಾಂಡ್ರೆ, ಇದೀಗ ಹೊಸ ಸಿನಿಮಾನಲ್ಲಿ ನಟಿಸಿದ್ದಾರೆ.

    ‘ಗಾಳಿಪಟ 2’ ಮೂಲಕ

ಬರೋಬ್ಬರಿ 17 ವರ್ಷಗಳ ಬಳಿಕ ಶರ್ಮಿಳಾ, ನಟ ದರ್ಶನ್ ಜೊತೆಗೆ ನಟಿಸಿದ್ದಾರೆ. ‘ದಿ ಡೆವಿಲ್’ ಸಿನಿಮಾನಲ್ಲಿ.

 ‘ದಿ ಡೆವಿಲ್’ ಸಿನಿಮಾನಲ್ಲಿ

2008 ರಲ್ಲಿ ಬಿಡುಗಡೆ ಆಗಿದ್ದ ‘ನವಗ್ರಹ’ ಸಿನಿಮಾನಲ್ಲಿ ನಟ ದರ್ಶನ್ ಹಾಗೂ ಶರ್ಮಿಳಾ ಮಾಂಡ್ರೆ ಒಟ್ಟಿಗೆ ನಟಿಸಿದ್ದರು.

    ‘ನವಗ್ರಹ’ ಸಿನಿಮಾನಲ್ಲಿ

‘ದಿ ಡೆವಿಲ್’ ಸಿನಿಮಾನಲ್ಲಿ ಶರ್ಮಿಳಾ ಮಾಂಡ್ರೆ ಅವರದ್ದು ಬಹಳ ವಿಶೇಷವಾದ ಪಾತ್ರವಂತೆ, ಸಿನಿಮಾ ನೋಡಿಯೇ ತಿಳಿಯಿರಿ ಎಂದಿದ್ದಾರೆ ನಟಿ.

       ವಿಶೇಷವಾದ ಪಾತ್ರ

ಶರ್ಮಿಳಾ ಮಾಂಡ್ರೆ ಈಗ ನಟಿ ಆಗಿರುವ ಜೊತೆಗೆ ನಿರ್ಮಾಪಕಿಯೂ ಆಗಿದ್ದಾರೆ. ಕನ್ನಡ, ತಮಿಳು ಸಿನಿಮಾಗಳ ನಿರ್ಮಿಸುತ್ತಿದ್ದಾರೆ.

ನಿರ್ಮಾಪಕಿಯೂ ಆಗಿದ್ದಾರೆ