ಇತಿಹಾಸ ನಿರ್ಮಿಸಿದ ಶೆರ್ರಿ ಸಿಂಗ್, ಭಾರತದ ಮೊದಲ ‘ಮಿಸೆಸ್ ಯೂನಿವರ್ಸ್’

11 OCT 2025

By  Manjunatha

ಭಾರತಕ್ಕೆ ಈ ವರೆಗೆ ಕೆಲವಾರು ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್​​ಗಳು ಬಂದಿವೆ, ಆದರೆ ಇದೇ ಮೊದಲ ಬಾರಿಗೆ ಮಿಸೆಸ್ ಯೂನಿವರ್ಸ್ ದೊರೆತಿದೆ.

    ಮಿಸೆಸ್ ಯೂನಿವರ್ಸ್

ಮದುವೆಯಾದ ಮಹಿಳೆಯರಿಗೆ ನಡೆಸುವ ಸೌಂದರ್ಯ ಸ್ಪರ್ಧೆಯಾದ ಮಿಸೆಸ್ ಯೂನಿವರ್ಸ್​​ ಈ ಬಾರಿ ಭಾರತದ ಮಹಿಳೆಯ ಪಾಲಾಗಿದೆ.

ಭಾರತದ ಮಹಿಳೆಯ ಪಾಲು

ಫಿಲಿಫೀನ್ಸ್​​ನಲ್ಲಿ 2025ರ ಮಿಸೆಸ್ ಯೂನಿವರ್ಸ್ ಸ್ಪರ್ಧೆ ನಡೆದಿದ್ದು, ವಿಶ್ವದ 120 ದೇಶಗಳ ಸ್ಪರ್ಧಿಗಳು ಭಾಗಿ ಆಗಿದ್ದರು.

    ಮಿಸೆಸ್ ಯೂನಿವರ್ಸ್

ಅಂತಿಮವಾಗಿ ಭಾರತದ ಶೆರ್ರಿ ಸಿಂಗ್ ಅವರಿಗೆ 2025ರ ಮಿಸೆಸ್ ಯೂನಿವರ್ಸ್ ಕಿರೀಟ ಧಕ್ಕಿತು.

       ಭಾರತದ ಶೆರ್ರಿ ಸಿಂಗ್

ಶೆರ್ರಿ ಸಿಂಗ್, ಭಾರತದ ಪರವಾಗಿ ಮಿಸೆಸ್ ಯೂನಿವರ್ಸ್ ಕಿರೀಟ ಧರಿಸಿದ ಮೊದಲ ಮಹಿಳೆ ಎನಿಸಿಕೊಂಡರು.

ಮೊದಲ ಭಾರತದ ಮಹಿಳೆ

ಶೆರ್ರಿ ಸಿಂಗ್ ಅವರ ಮಾತು, ವ್ಯಕ್ತಿತ್ವ, ಸೌಂದರ್ಯ, ದೇಹಾಕಾರ ಎಲ್ಲವನ್ನೂ ಪರಿಗಣಿಸಿ ಅವರಿಗೆ ಮಿಸೆಸ್ ಯೂನಿವರ್ಸ್ ನೀಡಲಾಯ್ತು.

  ಹಲವು ಅಂಶ ಪರಿಗಣನೆ

ಮಿಸೆಸ್ ಯೂನಿವರ್ಸ್ ಜಡ್ಜ್​​ಗಳ ಎದುರು ಅವರು ಮಹಿಳಾ ಸಬಲೀಕರಣ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದರು.

    ಮಹಿಳಾ ಸಬಲೀಕರಣ

120 ದೇಶಗಳ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗಿ ಆಗಿದ್ದರು, ಫೈನಲ್​​ಗೆ 11 ಮಂದಿ ತಲುಪಿದ್ದರು. ಅಂತಿಮವಾಗಿ ಗೆದ್ದಿದ್ದು ಭಾರತೀಯ ಮಹಿಳೆ.

      ಫೈನಲ್​​ಗೆ 11 ಮಂದಿ