Pic credit - Instagram

Author: Rajesh Duggumane

12 July 2025

ಶಿವರಾಜ್​ಕುಮಾರ್ ಮಾಡಿದ ಅಪರೂಪದ ಸಾಧನೆಗಳಿವು

ಬರ್ತ್​ಡೇ ಬಾಯ್ 

ಶಿವರಾಜ್​ಕುಮಾರ್ ಅವರಿಗೆ ಇಂದು (ಜುಲೈ 12) 63ನೇ ವರ್ಷದ ಬರ್ತ್​ಡೇ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. 

ಯಂಗ್-ಎನರ್ಜಿಟಿಕ್ 

63ನೇ ವಯಸ್ಸಿನಲ್ಲೂ ಶಿವರಾಜ್​ಕುಮಾರ್ ಅವರು ಯಂಗ್ ಆ್ಯಂಡ್ ಎನರ್ಜಿಟಿಕ್ ಎನಿಸಿಕೊಂಡಿದ್ದಾರೆ. ಇದು ಅನೇಕರಿಗೆ ಸ್ಫೂರ್ತಿ. 

ಅಪರೂಪದ ಸಾಧನೆ 

ಶಿವರಾಜ್​ಕುಮಾರ್ ಹೆಸರಲ್ಲಿ ಅನೇಕ ಅಪರೂಪದ ಸಾಧನೆಗಳು ಇವೆ. ಇದನ್ನು ಸದ್ಯದ ಮಟ್ಟಿಗೆ ಯಾರೂ ಮಾಡಲು ಸಾಧ್ಯವಿಲ್ಲ. 

ಓಂ ಸಿನಿಮಾ 

ಶಿವರಾಜ್​ಕುಮಾರ್ ನಟನೆಯ ‘ಓಂ’ ಚಿತ್ರ 550 ಬಾರಿ ರೀ-ರಿಲೀಸ್ ಕಂಡಿದೆ. ಈ ಸಾಧನೆಯನ್ನು ಮುರಿಯಲು ಯಾವ ಸಿನಿಮಾ ಬಳಿಯೂ ಸಾಧ್ಯವಿಲ್ಲ. 

ಡಾಕ್ಟರೇಟ್ 

ಶಿವರಾಜ್​ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ ಅನ್ನೋದು ವಿಶೇಷ. 

ಮೊದಲ ಚಿತ್ರ 

ಶಿವರಾಜ್ ಕುಮಾರ್ ಹೀರೋ ಆಗಿ ನಟಿಸಿದ ಮೊದಲ ಚಿತ್ರ ‘ಆನಂದ್’ ಯಶಸ್ಸು ಕಂಡಿತು. 25 ವಾರಗಳ ಕಾಲ ಈ ಸಿನಿಮಾ ಪ್ರದರ್ಶನ ಕಂಡಿತ್ತು. 

ಹ್ಯಾಟ್ರಿಕ್ ಹೀರೋ

ಶಿವರಾಜ್​ಕುಮಾರ್ ನಟಿಸಿದ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿ ಹಿಟ್ ಆದವು. ಇದು ಅವರು ಮಾಡಿದ ಸಾಧನೆಗಳಲ್ಲಿ ಒಂದು. 

ಹಲವು ಚಿತ್ರ 

ಶಿವರಾಜ್​ಕುಮಾರ್ ನಟನೆಯ 2-3 ಸಿನಿಮಾಗಳು ಪ್ರತಿ ವರ್ಷ ರಿಲೀಸ್ ಆಗುತ್ತವೆ. ಇದನ್ನು ಯಾವ ನಟರೂ ಅಚೀವ್ ಮಾಡಲು ಸಾಧ್ಯವಾಗಿಲ್ಲ.