ಮತ್ತೆ ದಕ್ಷಿಣದತ್ತ ಬರುತ್ತಿದ್ದಾರೆ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್

06 Apr 2025

By  Manjunatha

ಶ್ರದ್ಧಾ ಕಪೂರ್, ಬಾಲಿವುಡ್​ನ ಎ ಲಿಸ್ಟ್​ ನಾಯಕಿ. ದೀಪಿಕಾ, ಆಲಿಯಾರ ಸಾಲಿಗೆ ಸೇರುತ್ತಾರೆ ಶ್ರದ್ಧಾ ಕಪೂರ್.

      ನಟಿ ಶ್ರದ್ಧಾ ಕಪೂರ್

ಇತ್ತೀಚೆಗೆ ಬಿಡುಗಡೆ ಆದ ‘ಸ್ತ್ರೀ 2’ ಸಿನಿಮಾ ಮೂಲಕ ದೊಡ್ಡ ಯಶಸ್ಸನ್ನು ಗಳಿಸಿದ್ದಾರೆ.

 ‘ಸ್ತ್ರೀ 2’ ಸಿನಿಮಾ ಯಶಸ್ಸು

‘ಸ್ತ್ರೀ 2’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಒಂದರ ಹಿಂದೊಂದು ಹೊಸ ಸಿನಿಮಾ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ.

ಒಂದರ ಹಿಂದೊಂದು ಚಿತ್ರ

ಶ್ರದ್ಧಾ ಕಪೂರ್ ಇದೀಗ ಬಾಲಿವುಡ್​ನ ಬ್ಯುಸಿ ನಟಿಯರಲ್ಲಿ ಒಬ್ಬರು. ಇದೀಗ ದಕ್ಷಿಣದಲ್ಲೂ ಅವರಿಗೆ ಬೇಡಿಕೆ ಬಂದಿದೆ.

  ಬಾಲಿವುಡ್​ನ ಬ್ಯುಸಿ ನಟಿ

ಈ ಹಿಂದೆ ಪ್ರಭಾಸ್ ಜೊತೆಗೆ ‘ಸಾಹೋ’ ಸಿನಿಮಾದಲ್ಲಿ ಶ್ರದ್ಧಾ ನಟಿಸಿದ್ದರು. ಈ ಸಿನಿಮಾ ಫ್ಲಾಪ್ ಆಗಿತ್ತು.

ಪ್ರಭಾಸ್ ಜೊತೆಗೆ ‘ಸಾಹೋ’

ಈಗ ಶ್ರದ್ಧಾ ಕಪೂರ್ ಮತ್ತೆ ದಕ್ಷಿಣ ಭಾರತದತ್ತ ಮುಖ ಮಾಡಿದ್ದು ತೆಲುಗಿನ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿ ನಟಿಸಲಿದ್ದಾರೆ.

     ತೆಲುಗಿನ ಸ್ಟಾರ್ ನಟ

ಜೂ ಎನ್​ಟಿಆರ್ ಪೌರಾಣಿಕ ಕತೆ ಹೊಂದಿರುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಶ್ರದ್ಧಾ ಕಪೂರ್.

ಜೂ ಎನ್​ಟಿಆರ್ ಪೌರಾಣಿಕ

ಶ್ರದ್ಧಾ ಕಪೂರ್ ಅವರ ಮೊದಲ ದಕ್ಷಿಣದ ಸಿನಿಮಾ ಅಷ್ಟೇನೂ ಯಶಸ್ಸು ಗಳಿಸಿರಲಿಲ್ಲ. ಎರಡನೇ ಸಿನಿಮಾ ಏನಾಗಲಿದೆ ನೋಡಬೇಕಿದೆ.

       ಎರಡನೇ ಸಿನಿಮಾ

ಪ್ರಸ್ತುತ ಶ್ರದ್ಧಾ ಕಪೂರ್ ‘ಸ್ತ್ರೀ 3’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

   ಶ್ರದ್ಧಾ ಕಪೂರ್ ಸಿನಿಮಾ