ಐಶಾರಾಮಿ ಮನೆ ಖರೀದಿಸಿದ ಕಮಲ್ ಪುತ್ರಿ ನಟಿ ಶ್ರುತಿ ಹಾಸನ್

21 June 2025

By  Manjunatha

ಖ್ಯಾತ ನಟ ಕಮಲ್ ಹಾಸನ್ ನಟಿಸಿ ನಿರ್ಮಾಣ ಮಾಡಿದ್ದ ‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಗಿದೆ.

     ನಟ ಕಮಲ್ ಹಾಸನ್

ಆದರೆ ಅವರ ಪುತ್ರಿ, ನಟಿ ಶ್ರುತಿ ಹಾಸನ್ ಮಾತ್ರ ಮುಂಬೈನಲ್ಲಿ ಭಾರಿ ಬೆಲೆಗೆ ಐಶಾರಾಮಿ ಮನೆ ಖರೀದಿ ಮಾಡಿದ್ದಾರೆ.

        ನಟಿ ಶ್ರುತಿ ಹಾಸನ್

ಶ್ರುತಿ ಹಾಸನ್ ಅವರು ಚೆನ್ನೈನವರಾದರೂ ಬಹಳ ವರ್ಷಗಳಿಂದಲೂ ಮುಂಬೈನಲ್ಲಿಯೇ ನೆಲೆಸಿದ್ದಾರೆ.

ಶ್ರುತಿ ಹಾಸನ್ ಚೆನ್ನೈನವರು

ಶ್ರುತಿ ಹಾಸನ್ ಇದೀಗ ಮುಂಬೈನ ಅಂಧೇರಿ ಏರಿಯಾನಲ್ಲಿ ದೊಡ್ಡ ಅಪಾರ್ಟ್​ಮೆಂಟ್ ಖರೀದಿ ಮಾಡಿದ್ದಾರೆ.

    ಅಂಧೇರಿ ಏರಿಯಾನಲ್ಲಿ

ಇದೇ ಕಾರಣಕ್ಕೆ ಶ್ರುತಿ ಹಾಸನ್ ತಮ್ಮ ಮುಂಬೈನ ಮನೆಯನ್ನು ತಮ್ಮ ಟೇಸ್ಟ್​ಗೆ ಅನುಸಾರವಾಗಿ ಮರು ವಿನ್ಯಾಸ ಮಾಡಿಸಿದ್ದಾರೆ.

   ಟೇಸ್ಟ್​ಗೆ ಅನುಸಾರವಾಗಿ

ಶ್ರುತಿ ಅವರ ಹೊಸ ಮನೆಯಲ್ಲಿ ಮ್ಯೂಸಿಕ್ ರೂಂ, ಬಾರ್, ಧ್ಯಾನದ ಕೋಣೆ, ಕಚೇರಿ, ಸುಂದರವಾದ ಅಡುಗೆ ಮನೆ, ಹಾಲ್ ಎಲ್ಲವೂ ಇದೆ.

 ಮನೆಯ ವಿನ್ಯಾಸ ನೋಡಿ

ಶ್ರುತಿ ಅವರು ಈಗ ಖರೀದಿ ಮಾಡಿರುವ ಮನೆಯ ಬೆಲೆ ಬರೋಬ್ಬರಿ 14 ಕೋಟಿ ರೂಪಾಯಿಗಳಾಗಿವೆ.

    ಮನೆಯ ಬೆಲೆ ಎಷ್ಟು?

ಅಂದಹಾಗೆ ಶ್ರುತಿ ಹಾಸನ್ ಈ ಮೊದಲೂ ಸಹ ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದರಂತೆ. ಆದರೆ ಅದು ಅಷ್ಟು ದೊಡ್ ಮನೆ ಆಗಿರಲಿಲ್ಲ.

   ಈ ಹಿಂದೆಯೂ ಖರೀದಿ