ಶ್ರುತಿ ಹಾಸನ್​ಗೆ ಮದುವೆಯೆಂದರೆ ಭಯವಂತೆ, ಬ್ರೇಕ್​ಅಪ್ ಕಾರಣ ಬಿಚ್ಚಿಟ್ಟ ನಟಿ

11 July 2025

By  Manjunatha

ಶ್ರುತಿ ಹಾಸನ್ ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.

         15 ವರ್ಷಗಳಿಂದ

ಕಮಲ್ ಹಾಸನ್ ಪುತ್ರಿ ಆಗಿದ್ದರು ಸಹ ತಮ್ಮದೇ ಆದ ಗುರುತನ್ನು ಚಿತ್ರರಂಗದಲ್ಲಿ ಸಂಪಾದನೆ ಮಾಡಿಕೊಂಡಿದ್ದಾರೆ ನಟಿ.

     ಕಮಲ್ ಹಾಸನ್ ಪುತ್ರಿ

ಶ್ರುತಿ ಹಾಸನ್ ಕಳೆದ ಕೆಲ ವರ್ಷಗಳಿಂದ ಶಂತನು ಹಜಾರಿಕಾ ಜೊತೆಗೆ ಲಿವ್ ಇನ್ ರಿಲೇಷನ್​​ಶಿಪ್​​ನಲ್ಲಿ ಇದ್ದರು.

       ಶಂತನು ಹಜಾರಿಕಾ

ಇಬ್ಬರೂ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಕಳೆದ ವರ್ಷ ಶಂತನು ಜೊತೆಗೆ ಶ್ರುತಿ ಬ್ರೇಕಪ್ ಮಾಡಿಕೊಂಡರು.

 ಬ್ರೇಕಪ್ ಮಾಡಿಕೊಂಡರು

ಇದೀಗ ಪಾಡ್​ಕಾಸ್ಟ್ ಒಂದರಲ್ಲಿ ಮಾತನಾಡಿರುವ ಶ್ರುತಿ ಹಾಸನ್, ತಾವೇ ಶಂತನು ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಹೇಳಿದ್ದಾರೆ.

   ನಟಿಯಿಂದಲೇ ಬ್ರೇಕಪ್

ನಮ್ಮಿಬ್ಬರ ನಡುವೆ ಹೊಂದಾಣಿಕೆ ಸರಿ ಆಗುತ್ತಿಲ್ಲ ಎನಿಸಿತು ಹಾಗಾಗಿ ನಾವು ಬ್ರೇಕಪ್ ಮಾಡಿಕೊಳ್ಳಬೇಕಾಯ್ತು ಎಂದಿದ್ದಾರೆ.

 ಯಾವ ಕಾರಣಕ್ಕೆ ಬ್ರೇಕಪ್

ಮದುವೆ ಎಂದರೆ ಈಗ ಹೆದರಿಕೆ ಆಗುತ್ತದೆ. ಮದುವೆ ಎಂದರೆ ಮಕ್ಕಳ ಭವಿಷ್ಯ, ನಮ್ಮ ಜೀವನಪರ್ಯಂತ ಜವಾಬ್ದಾರಿ ಅದೆಲ್ಲ ಕಷ್ಟ ಎಂದಿದ್ದಾರೆ.

   ಮದುವೆಯೆಂದರೆ ಭಯ

ಶ್ರುತಿ ಹಾಸನ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಟನೆಯ ‘ಕೂಲಿ’ ಶೀಘ್ರವೇ ಬಿಡುಗಡೆ ಆಗಲಿದೆ.

     ಸಿನಿಮಾಗಳಲ್ಲಿ ಬ್ಯುಸಿ