ಕೊಂಕು ಮಾತನಾಡಿದವರ ಬಾಯಿ ಮುಚ್ಚಿಸಿದ ನಟಿ ಶೋಭಿತಾ ಧುಲಿಪಾಲ

22 Apr 2025

By  Manjunatha

ಶೋಭಿತಾ ಧುಲಿಪಾಲ ಇತ್ತೀಚೆಗಷ್ಟೆ ತೆಲುಗಿನ ಖ್ಯಾತ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದಾರೆ.

     ಶೋಭಿತಾ ಧುಲಿಪಾಲ

ನಾಗ ಚೈತನ್ಯಗೆ ಇದು ಎರಡನೇ ಮದುವೆ, ಆದರೆ ಶೋಭಿತಾ ಧುಲಿಪಾಲಗೆ ಇದು ಮೊದಲ ಮದವೆ.

 ನಾಗ ಚೈತನ್ಯ-ಶೋಭಿತಾ

ಇಬ್ಬರ ಮದುವೆ ಬಲು ಅದ್ಧೂರಿಯಾಗಿ ಹೈದರಾಬಾದ್​ನಲ್ಲಿ ನಡೆಯಿತು. ಹಲವು ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು.

      ಹೈದರಾಬಾದ್​ನಲ್ಲಿ..

ಶೋಭಿತಾ ಧುಲಿಪಾಲ ಮಾಡೆಲ್ ಆಗಿದ್ದು, ಮೊದಲಿನಿಂದಲೂ ಗ್ಲಾಮರಸ್ ಆಗಿಯೇ ಕಾಣಿಸಿಕೊಳ್ಳುತ್ತಾ ಬಂದಿದ್ದಾರೆ.

ಗ್ಲಾಮರಸ್ ನಟಿಯಾಗಿದ್ದರು

ನಾಗ ಚೈತನ್ಯ ಅವರನ್ನು ಮದುವೆ ಆದ ಬಳಿಕ ಶೋಭಿತಾ ಸಿನಿಮಾ, ಮಾಡೆಲಿಂಗ್ ಬಿಡಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

 ಸುದ್ದಿಗಳು ಹರಿದಾಡಿದ್ದವು

ಆದರೆ ಅದನ್ನು ಸುಳ್ಳು ಮಾಡಿರುವ ಶೋಭಿತಾ ಧುಲಿಪಾಲ, ನಾಗ ಚೈತನ್ಯ ಜೊತೆ ಮದುವೆಯ ಬಳಿಕವೂ ನಟನೆ ಮುಂದುವರೆಸಿದ್ದಾರೆ.

ನಟನೆ ಮುಂದುವರೆಸಿದ್ದಾರೆ

ನಟನೆ ಮಾತ್ರವಲ್ಲದೆ ಫ್ಯಾಷನ್ ಮಾಡಲಿಂಗ್ ಅನ್ನೂ ಸಹ ಶೋಭಿತಾ ಧುಲಿಪಾಲ ಮುಂದುವರೆಸಿದ್ದು, ಮೊದಲಿನಂತೆ ಗ್ಲಾಮರಸ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

ನಟನೆ ಮತ್ತು ಮಾಡೆಲಿಂಗ್

ಪ್ರಸ್ತುತ ಶೋಭಿತಾ, ತೆಲುಗಿನ ಒಂದು ಸಿನಿಮಾ ಹಾಗೂ ಹಿಂದಿಯ ಒಂದು ಸಿನಿಮಾನಲ್ಲಿ ನಟಿಸುತ್ತಿದ್ದಾರಂತೆ.

   ಸಿನಿಮಾಗಳಿವೆ ಕೈಯಲ್ಲಿ