ತಾಯಿ ಆಗುವ ಬಯಕೆಯನ್ನು ಬಿಚ್ಚಿಟ್ಟ ನಟಿ ಶೋಭಿತಾ ಧುಲಿಪಾಲ

31 May 2025

By  Manjunatha

ನಟಿ ಶೋಭಿತಾ ಧುಲಿಪಾಲ ಇತ್ತೀಚೆಗಷ್ಟೆ ನಟ ನಾಗ ಚೈತನ್ಯ ಜೊತೆಗೆ ಸರಳವಾಗಿ ವಿವಾಹವಾಗಿದ್ದಾರೆ.

ನಟಿ ಶೋಭಿತಾ ಧುಲಿಪಾಲ

ಇತ್ತೀಚೆಗಷ್ಟೆ ನಟಿ ಶೋಭಿತಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತಿಯೊಟ್ಟಿಗೆ ಪ್ರವಾಸಕ್ಕೆ ಸಹ ಹೋಗಿ ಬಂದಿದ್ದಾರೆ.

    ಹುಟ್ಟುಹಬ್ಬ ಆಚರಣೆ

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಶೋಭಿತಾ ಧುಲಿಪಾಲ, ತಾವು ತಾಯಿ ಆಗಲು ಬಯಸುತ್ತಿರುವುದಾಗಿ ಹೇಳಿದ್ದಾರೆ.

    ತಾಯಿ ಆಗುವ ಬಯಕೆ

ನಾನು ಜೀವನದಲ್ಲಿ ಹೆಚ್ಚಿನದ್ದೇನೂ ಆಶಿಸುತ್ತಿಲ್ಲ. ನನಗೆ ತಾಯ್ತನದ ಅನುಭವ ಪಡೆಯುವ ಬಯಕೆಯಾಗಿದೆ ಎಂದಿದ್ದಾರೆ.

    ತಾಯ್ತನದ ಅನುಭವ

ಹಾಗೆಂದು ಶೋಭಿತಾ ಧುಲಿಪಾಲ ಗರ್ಭಿಣಿ ಏನಲ್ಲ, ಯಾವಾಗಲಾದರೂ ಆಗಲಿ, ತಾಯಿ ಆಗುವುದು ನನ್ನ ಪಾಲಿಗೆ ಅದ್ಭುತ ಅನುಭವ ಎಂದಿದ್ದಾರೆ.

  ಶೋಭಿತಾ ಗರ್ಭಿಣಿ ಅಲ್ಲ

ನಾನು ಎಲ್ಲ ಕರ್ತವ್ಯಗಳನ್ನು ಜೊತೆಯಾಗಿ ನಿರ್ವಹಿಸುವುದರಲ್ಲಿ ನಂಬಿಕೆ ಇಟ್ಟಿದ್ದೇನೆ, ಗೃಹಿಣಿಯಾಗಿ, ಪತ್ನಿಯಾಗಿ, ವೃತ್ತಿಪರಳಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದೇನೆ ಎಂದಿದ್ದಾರೆ.

    ಜವಾಬ್ದಾರಿಗಳ ಮಾತು

ಶೋಭಿತಾ ಧುಲಿಪಾಲ ಬಹುಭಾಷಾ ನಟಿ ಆಗಿರುವ ಜೊತೆಗೆ ಬಹಳ ಬೇಡಿಕೆಯ ಮಾಡೆಲ್ ಸಹ ಹೌದು.

ಬಹಳ ಬೇಡಿಕೆಯ ಮಾಡೆಲ್

ಶೋಭಿತಾ ಧುಲಿಪಾಲ ಹಾಗೂ ನಾಗ ಚೈತನ್ಯ ಇತ್ತೀಚೆಗಷ್ಟೆ ಮದುವೆ ಆಗಿದ್ದಾರೆ. ಶೋಭಿತಾಗೆ ಇದು ಮೊದಲ ಮದುವೆ, ನಾಗ್​ಗೆ ಎರಡನೇ ಮದುವೆ.

ಇತ್ತೀಚೆಗಷ್ಟೆ ಮದುವೆ ಆಗಿದೆ