ಶೋಭಿತಾ ಧುಲಿಪಾಲ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

02 May 2025

By  Manjunatha

ನಾಗ ಚೈತನ್ಯ ಪತ್ನಿ, ನಟಿ ಶೋಭಿತಾ ಧುಲಿಪಾಲ, ಮದುವೆಯ ಬಳಿಕ ಇನ್​ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ನಟಿ ಶೋಭಿತಾ ಧುಲಿಪಾಲ

ಶೋಭಿತಾ ಧುಲಿಪಾಲ ನಟಿಯಾಗಿರುವ ಜೊತೆಗೆ ಬಲು ಜನಪ್ರಿಯ ಫ್ಯಾಷನ್ ಮಾಡೆಲ್ ಸಹ ಆಗಿದ್ದಾರೆ.

      ಫ್ಯಾಷನ್ ಮಾಡೆಲ್

ಶೋಭಿತಾ ಧುಲಿಪಾಲ ಸೂಪರ್ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಹಲವು ಪ್ರತಿಷ್ಠಿತ ಶೋಗಳಲ್ಲಿ ಭಾಗವಹಿಸಿದ್ದಾರೆ.

  ಸೂಪರ್ ಮಾಡೆಲ್ ನಟಿ

ಶೋಭಿತಾ ಧುಲಿಪಾಲ ಭಾರತೀಯ ಉಡುಪಿನಲ್ಲೂ ಕಾಣಿಸಿಕೊಳ್ಳುತ್ತಾರೆ. ಇದೀಗ ಭಾರತೀಯ ಉಡುಪು ಧರಿಸಿ ಫೋಟೊ ಅಪ್​ಲೋಡ್ ಮಾಡಿದ್ದಾರೆ.

     ಭಾರತೀಯ ಉಡುಪು

ಈ ಚಿತ್ರದಲ್ಲಿ ಶೋಭಿತಾ ಧುಲಿಪಾಲ ಓಲಿವ್ ಗ್ರೀನ್ ಸಿಲ್ಕ್ ಸೀರೆಯನ್ನು ಧರಿಸಿದ್ದಾರೆ. ಇದು ಬಹಳ ದುಬಾರಿ ಸೀರೆ.

  ಓಲಿವ್ ಗ್ರೀನ್ ಸಿಲ್ಕ್ ಸೀರೆ

ಶೋಭಿತಾ ಧುಲಿಪಾಲ ಧರಿಸಿರುವುದು ಖ್ಯಾತ ವಿನ್ಯಾಸಕ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ವಿಶೇಷ ಸೀರೆ.

     ಮನೀಶ್ ಮಲ್ಹೋತ್ರಾ

ಶೋಭಿತಾ ಧುಲಿಪಾಲ ಧರಿಸಿರುವ ಈ ಸೀರೆಯ ಬೆಲೆ ಬರೋಬ್ಬರಿ 3.95 ಲಕ್ಷ ರೂಪಾಯಿಗಳಂತೆ.

     ಸೀರೆಯ ಬೆಲೆ ಎಷ್ಟು?

ಶೋಭಿತಾ ಧುಲಿಪಾಲ ಸೀರೆಯ ಜೊತೆಗೆ ಬಹಳ ದುಬಾರಿಯಾದ ಆಭರಣಗಳನ್ನು ಸಹ ಧರಿಸಿದ್ದಾರೆ. ಅದೂ ಸಹ ಭಾರಿ ದುಬಾರಿ ಬೆಲೆಯದ್ದು.

  ದುಬಾರಿಯಾದ ಆಭರಣ