ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಸೋನಂ ಕಪೂರ್

07 OCT 2025

By  Manjunatha

ಸೋನಂ ಕಪೂರ್, ಬಾಲಿವುಡ್​​ನ ಸ್ಟಾರ್ ನಟಿಯಾಗಿ ಮೆರೆದವರು, ಮದುವೆ ಬಳಿಕ ಸಿನಿಮಾಗಳಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ.

    ನಟಿ ಸೋನಂ ಕಪೂರ್

ರಣ್​​ಬೀರ್ ಕಪೂರ್ ಜೊತೆಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೋನಂ ಕಪೂರ್ ಹಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ.

ರಣ್​​ಬೀರ್ ಕಪೂರ್ ಜೊತೆಗೆ

ಅನಿಲ್ ಕಪೂರ್ ಪುತ್ರಿಯೂ ಆಗಿರುವ ಸೋನಂ ಕಪೂರ್ ಖ್ಯಾತ ಉದ್ಯಮಿ ಆನಂದ್ ಅಹುಜಾ ಅವರನ್ನು ವಿವಾಹವಾಗಿದ್ದಾರೆ.

     ಅನಿಲ್ ಕಪೂರ್ ಪುತ್ರಿ

ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಅವರಿಗೆ 2022 ರಲ್ಲಿ ಗಂಡು ಮಗುವಿನ ಜನನ ಆಗಿದೆ.

   ಪತಿ ಆನಂದ್ ಅಹುಜಾ

ಇದೀಗ ಸೋನಂ ಕಪೂರ್ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸುದ್ದಿ ಹರಿದಾಡುತ್ತಿವೆ.

    2ನೇ ಮಗುವಿನ ನಿರೀಕ್ಷೆ

ಇಂಗ್ಲೆಂಡ್​​ನಲ್ಲಿ ನೆಲೆಸಿರುವ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಎರಡನೇ ಮಗುವಿನ ಸ್ವಾಗತಕ್ಕೆ ಸಜ್ಜಾಗುತ್ತಿದ್ದಾರಂತೆ.

 ಸೋನಂ ಹಾಗೂ ಆನಂದ್

ಆದರೆ ಈ ಬಗ್ಗೆ ನಟಿ ಸೋನಂ ಕಪೂರ್ ಅವರು ಯಾವುದೇ ಅಧಿಕೃತ ಹೇಳಿಕೆಯನ್ನು ಈ ವರೆಗೆ ನೀಡಿಲ್ಲ.

    ಅಧಿಕೃತ ಹೇಳಿಕೆ ಶೀಘ್ರ

ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಅವರು 2018 ರಲ್ಲಿ ಪರಸ್ಪರ ಪ್ರೀತಿಸಿ ವಿವಾಹ ಆಗಿದ್ದರು.

    ಸಿನಿಮಾಗಳಿಂದ ದೂರ