Pic credit - Instagram

Author: Rajesh Duggumane

13 Aug 2025

ಎಲ್ಲ ಕಡೆ ಸದ್ದು ಮಾಡ್ತಿರೋ ಸೌಬಿನ್ ಶಾಹಿರ್ ಯಾರು?

ಸೌಬಿನ್ ಶಾಹಿರ್ 

ಸೌಬಿನ್ ಶಾಹಿರ್ ಅವರು ‘ಕೂಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಗಮನ ಸೆಳೆಯುವಂತಿದೆ. 

ಟ್ರೇಲರ್ 

ಟ್ರೇಲರ್​ನಲ್ಲಿ ಸೌಬಿನ್ ಪಾತ್ರದ ಚಿಕ್ಕ ಝಲಕ್ ತೋರಿಸಲಾಗಿದೆ. ಇದು ಅಭಿಮಾನಿಗಳಿಗೆ ಇಷ್ಟ ಆಗುವ ರೀತಿಯಲ್ಲಿದೆ. 

ಕೊಚ್ಚಿ

ಸೌಬಿನ್ ಹುಟ್ಟಿದ್ದು ಕೊಚ್ಚಿಯಲ್ಲಿ. ಅವರು ಮಲಯಾಳಂನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 

ನಟ-ನಿರ್ದೇಶಕ

ಸೌಬಿನ್ ಅವರು ಮಲಯಾಳಂನಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಆಗಿ ಕೆಲಸ ಮಾಡುತ್ತಿದ್ದಾರೆ.

ಸಹಾಯಕ ನಿರ್ದೇಶಕ 

2003ರಲ್ಲಿ ಸಹಾಯಕ ನಿರ್ದೇಶಕನಾಗಿ ಸೌಬಿನ್ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಪಡೆದರು. 

ನಟನೆ 

ನಟನೆ ಮೂಲಕ ಸೌಬಿನ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. ‘ಮಂಜುಮೇಲ್ ಬಾಯ್ಸ್’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. 

ತಲೆಯಲ್ಲಿ ಕೂದಲಿಲ್ಲ

ಸೌಬಿನ್​ಗೆ ತಲೆಯಲ್ಲಿ ಕೂದಲಿಲ್ಲ. ಆದರೆ, ಇದು ಅವರಿಗೆ ಸಮಸ್ಯೆ ಎಂದು ಎನಿಸಲೇ ಇಲ್ಲ. 

ಆಗಸ್ಟ್ 14

ಆಗಸ್ಟ್ 14ರಂದು ‘ಕೂಲಿ’ ಸಿನಿಮಾ ಎಲ್ಲ ಕಡೆಗಳಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ.