‘ಪರಾಶಕ್ತಿ’ ಮೂಲಕ ಭಿನ್ನ ರೀತಿಯ ಪಾತ್ರಕ್ಕೆ ಕೈ ಹಾಕಿದ ನಟಿ ಶ್ರೀಲೀಲಾ

09 NOV 2025

By  Manjunatha

ಶ್ರೀಲೀಲಾ ತೆಲುಗಿನ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಇದೀಗ ನಟಿ ಶ್ರೀಲೀಲಾ ಬಾಲಿವುಡ್​ಗೂ ಸಹ ಹೆಜ್ಜೆ ಇಟ್ಟಿದ್ದಾರೆ.

      ತೆಲುಗಿನ ಸ್ಟಾರ್ ನಟಿ

ಬಾಲಿವುಡ್​​ಗೆ ಹೆಜ್ಜೆ ಇಟ್ಟಕೂಡಲೇ ಶ್ರೀಲೀಲಾಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ನಾಲ್ಕು ಸಿನಿಮಾ ಸಹಿ ಹಾಕಿದ್ದಾರೆ.

 ಶ್ರೀಲೀಲಾಗೆ ಭಾರಿ ಬೇಡಿಕೆ

ಶ್ರೀಲೀಲಾ ಈ ವರೆಗೆ ಒಂದೇ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಅದೇ ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಂಡಿದ್ದಾರೆ.

   ಗ್ಲಾಮರ್ ಗೊಂಬೆಯಾಗಿ

ಆದರೆ ತಮಿಳಿನಲ್ಲಿ ಶ್ರೀಲೀಲಾ ನಟಿಸಿರುವ ಮೊದಲ ಸಿನಿಮಾನಲ್ಲಿ ಅವರಿಗೆ ಭಿನ್ನವಾದ ಪಾತ್ರವೊಂದು ಧಕ್ಕಿದೆ.

   ಭಿನ್ನವಾದ ಪಾತ್ರ ಸಿಕ್ಕಿದೆ

ತಮಿಳಿನಲ್ಲಿ ‘ಪರಾಶಕ್ತಿ’ ಹೆಸರಿನ ಸಿನಿಮಾನಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಈ ಸಿನಿಮಾನಲ್ಲಿ ಶ್ರೀಲೀಲಾ ಪಾತ್ರ ಭಿನ್ನವಾಗಿದೆ.

‘ಪರಾಶಕ್ತಿ’ ಹೆಸರಿನ ಸಿನಿಮಾ

80ರ ದಶಕದ ಕತೆಯನ್ನು ‘ಪರಾಶಕ್ತಿ’ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಗ್ಲಾಮರ್ ಗೊಂಬೆಯಾಗಿ ನಟಿ ಕಾಣಿಸಿಕೊಂಡಿಲ್ಲ.

        80ರ ದಶಕದ ಕತೆ

ಹಳೆಯ ಕಾಲದ ನಾಯಕಿಯರ ರೀತಿ ತುರುಬು, ಮಲ್ಲಿಗೆ ಮುಡಿದು ನಟಿ ಶ್ರೀಲೀಲಾ ಕಾಣಿಸಿಕೊಂಡಿದ್ದು, ಸಿನಿಮಾದ ಹಾಡು ಬಿಡುಗಡೆ ಆಗಿದೆ.

  ಹಳೆಯ ಕಾಲದ ನಾಯಕಿ

ಶ್ರೀಲೀಲಾ ನಟನೆಯ ‘ಪರಾಶಕ್ತಿ’ ಸಿನಿಮಾನಲ್ಲಿ ತಮಿಳಿನ ಖ್ಯಾತ ನಟ ಶಿವಕಾರ್ತಿಕೇಯನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

  ನಟ ಶಿವಕಾರ್ತಿಕೇಯನ್