ಮತ್ತೊಮ್ಮೆ ರವಿತೇಜ ಜೊತೆಗೆ ನಟಿಸಲಿದ್ದಾರೆ ಶ್ರೀಲೀಲಾ: ಇದು ಮೂರನೇ ಸಿನಿಮಾ

30 NOV 2025

By  Manjunatha

ಶ್ರೀಲೀಲಾ ಕನ್ನಡದ ನಟಿ, ಆದರೆ ಅವರು ಮೊದಲು ನಟಿಸಿದ್ದು ತೆಲುಗು ಸಿನಿಮಾನಲ್ಲಿ ಬಾಲ ನಟಿಯಾಗಿ.

  ಶ್ರೀಲೀಲಾ ಕನ್ನಡದ ನಟಿ

ಕನ್ನಡದ ‘ಕಿಸ್’ ಸಿನಿಮಾ ಮೂಲಕ ನಾಯಕಿ ಆದರು. ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಆಗುವ ಹಾದಿಯಲ್ಲಿದ್ದಾರೆ.

  ಕನ್ನಡದ ‘ಕಿಸ್’ ಸಿನಿಮಾ

ತೆಲುಗಿನಲ್ಲಿ ಬಹಳ ಕಡಿಮೆ ಅವಧಿಯಲ್ಲಿ ನಂಬರ್ 1 ನಟಿಯಾಗಿ ಶ್ರೀಲೀಲಾ ಗುರುತಿಸಿಕೊಂಡರು. ಈಗಲೂ ಅಲ್ಲಿ ಬೇಡಿಕೆಯ ನಟಿ.

 ನಂಬರ್ 1 ನಟಿ ಶ್ರೀಲೀಲಾ

ತೆಲುಗಿನಲ್ಲಿ ಶ್ರೀಲೀಲಾಗೆ ಹಿಟ್ ಸಿಕ್ಕಿದ್ದು ರವಿತೇಜ ನಟನೆಯ ‘ಧಮಾಕ’ ಸಿನಿಮಾ ಮೂಲಕ ಆ ಸಿನಿಮಾ ಬ್ಲಾಕ್ ಬಸ್ಟರ್.

        ‘ಧಮಾಕ’ ಸಿನಿಮಾ

ಅದಾದ ಬಳಿಕ ಶ್ರೀಲೀಲಾ, ರವಿತೇಜ ಜೊತೆಗೆ ‘ಮಾಸ್ ಜಾತರ’ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯ್ತು.

  ‘ಮಾಸ್ ಜಾತರ’ ಸಿನಿಮಾ

ಆದರೆ ‘ಮಾಸ್ ಜಾತರ’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಆದರೆ ಶ್ರೀಲೀಲಾ ತಮ್ಮ ಡ್ಯಾನ್ಸ್ ನಿಂದ ಗಮನ ಸೆಳೆದರು.

  ‘ಮಾಸ್ ಜಾತರ’ ಸಿನಿಮಾ

ಇದೀಗ ಮೂರನೇ ಬಾರಿ ಮತ್ತೆ ರವಿತೇಜ ಜೊತೆಗೆ ನಟಿಸಲು ಶ್ರೀಲೀಲಾ ಸಜ್ಜಾಗಿದ್ದಾರೆ. ಅದೂ ಹಿಟ್ ಸಿನಿಮಾದ ಸೀಕ್ವೆಲ್​​ನಲ್ಲಿ.

ಹಿಟ್ ಸಿನಿಮಾದ ಸೀಕ್ವೆಲ್​​ನ

ಶ್ರೀಲೀಲಾರಿಗೆ ತೆಲುಗಿನಲ್ಲಿ ಬೇಡಿಕೆ ಬರಲು ಕಾರಣವಾದ ‘ಧಮಾಕ’ ಸಿನಿಮಾದ ಸೀಕ್ವೆಲ್​​ನಲ್ಲಿ ರವಿತೇಜ-ಶ್ರೀಲೀಲಾ ನಟಿಸಲಿದ್ದಾರೆ.

   ಸಿನಿಮಾದ ಸೀಕ್ವೆಲ್​​ನಲ್ಲಿ