ಧನುಶ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ ಶ್ರೀಲೀಲಾ, ಸಿನಿಮಾ ಯಾವುದು?

25 SEP 2026

By  Manjunatha

ಶ್ರೀಲೀಲಾ ಕನ್ನಡದ ನಟಿ ಆದರೆ ಈಗ ಪರ ಭಾಷೆಯ ಸಿನಿಮಾಗಳಲ್ಲೇ ಹೆಚ್ಚು ಮಿಂಚುತ್ತಿದ್ದಾರೆ.

  ಶ್ರೀಲೀಲಾ ಕನ್ನಡದ ನಟಿ

ತೆಲುಗು ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿ ಸ್ಟಾರ್ ಆಗಿ ಮೆರೆದ ಶ್ರೀಲೀಲಾ ಈಗ ಬೇರೆ ಭಾಷೆಗಳಲ್ಲೂ ಬೇಡಿಕೆಯ ನಟಿ.

    ತೆಲುಗು ಚಿತ್ರರಂಗದಲ್ಲಿ

ತಮಿಳಿನಲ್ಲಿ ಶ್ರೀಲೀಲಾ ನಟಿಸಿದ್ದ ‘ಪರಾಶಕ್ತಿ’ ಹೆಸರಿನ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ.

‘ಪರಾಶಕ್ತಿ’ ಹೆಸರಿನ ಸಿನಿಮಾ

ಇದೀಗ ಎರಡನೇ ತಮಿಳು ಸಿನಿಮಾನಲ್ಲಿ ಶ್ರೀಲೀಲಾ ನಟಿಸುತ್ತಿದ್ದು, ಈ ಬಾರಿ ಸ್ಟಾರ್ ನಟನ ಜೊತೆ ನಟಿಸುತ್ತಿದ್ದಾರೆ.

 ಎರಡನೇ ತಮಿಳು ಸಿನಿಮಾ

ಶ್ರೀಲೀಲಾ ಅವರು ಧನುಶ್ ನಟನೆ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

 ನಾಯಕಿಯಾಗಿ ಶ್ರೀಲೀಲಾ

ಧನುಶ್, ಮಮ್ಮುಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಓಂ: ಚಾಪ್ಟರ್ 1’ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿ.

      ಧನುಶ್, ಮಮ್ಮುಟಿ

ವಿಶೇಷವೆಂದರೆ ಇದೇ ‘ಓಂ: ಚಾಪ್ಟರ್ 1’ ಸಿನಿಮಾನಲ್ಲಿ ಸಾಯಿ ಪಲ್ಲವಿ ಸಹ ನಾಯಕಿಯಾಗಿ ನಟಿಸುತ್ತಿದ್ದಾರೆ.

 ‘ಓಂ: ಚಾಪ್ಟರ್ 1’ ಸಿನಿಮಾ

‘ಓಂ’ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದ್ದು, ಎರಡು ಭಾಗಕ್ಕೆ ಇಬ್ಬರು ನಾಯಕಿಯರು ಎನ್ನಲಾಗುತ್ತಿದೆ.

       ಎರಡು ಭಾಗಗಳಲ್ಲಿ