ಬಾಲಿವುಡ್ ಸ್ಟಾರ್ ನಟಿಯಿಂದ ಅವಕಾಶ ಕಸಿದುಕೊಂಡ ನಟಿ ಶ್ರೀಲೀಲಾ

27 Apr 2025

By  Manjunatha

ನಟಿ ಶ್ರೀಲೀಲಾಗೆ ಬಾಲಿವುಡ್​ನಲ್ಲಿ ಅದೃಷ್ಟ ಖುಲಾಯಿಸಿದೆ. ಒಂದರ ಹಿಂದೊಂದು ಸಿನಿಮಾಗಳು ಸಿಗುತ್ತಿವೆ.

ಬಾಲಿವುಡ್​ನಲ್ಲಿ ಅದೃಷ್ಟ

ಶ್ರೀಲೀಲಾ ಈಗಾಗಲೇ ಎರಡು ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಚಿತ್ರೀಕರಣ ಚಾಲ್ತಿಯಲ್ಲಿದೆ.

ಚಿತ್ರೀಕರಣ ಚಾಲ್ತಿಯಲ್ಲಿದೆ

ಇದೀಗ ಮತ್ತೊಂದು ಹೊಸ ಹಿಂದಿ ಸಿನಿಮಾದ ಅವಕಾಶ ಶ್ರೀಲೀಲಾಗೆ ದೊರೆತಿದೆ. ಅದೂ ಸ್ಟಾರ್ ಹೀರೋ ಸಿನಿಮಾನಲ್ಲಿ.

   ಸ್ಟಾರ್ ಹೀರೋ ಸಿನಿಮಾ

ಶ್ರೀಲೀಲಾ ಈಗ ಸಿದ್ಧಾರ್ಥ್ ಮಲ್ಹೋತ್ರಾ ಅವರ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಆಕ್ಷನ್ ಕಾಮಿಡಿ ಸಿನಿಮಾ ಇದಾಗಿದೆ

   ಸಿದ್ಧಾರ್ಥ್ ಮಲ್ಹೋತ್ರಾ

ಸಿದ್ಧಾರ್ಥ್ ಮಲ್ಹೋತ್ರಾ ಸಿನಿಮಾಕ್ಕೆ ಮೊದಲಿಗೆ ಅನನ್ಯಾ ಪಾಂಡೆಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತಂತೆ.

   ಅನನ್ಯಾ ಪಾಂಡೆ ಆಯ್ಕೆ

ಆದರೆ ಶ್ರೀಲೀಲಾರ ಆಡಿಷನ್ ತೆಗೆದುಕೊಂಡ ನಿರ್ದೇಶಕರು, ಅನನ್ಯಾ ಪಾಂಡೆ ಬದಲಿಗೆ ಶ್ರೀಲೀಲಾರೆ ಪಾತ್ರಕ್ಕೆ ಸೂಕ್ತವೆಂಬ ನಿರ್ಧಾರ ಮಾಡಿದ್ದಾರೆ.

       ಶ್ರೀಲೀಲಾ ನಾಯಕಿ

ಶ್ರೀಲೀಲಾ ಈಗಾಗಲೇ ಕಾರ್ತಿಕ್ ಆರ್ಯನ್ ನಟನೆಯ ‘ಆಶಿಖಿ 3’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಚಾಲ್ತಿಯಲ್ಲಿದೆ.

  ಕಾರ್ತಿಕ್ ಆರ್ಯನ್ ಚಿತ್ರ

ಇದರ ಜೊತೆಗೆ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ನಟನೆಯ ಹೊಸ ಸಿನಿಮಾಕ್ಕೂ ಶ್ರೀಲೀಲಾ ನಾಯಕಿ.

    ಇಬ್ರಾಹಿಂ ಅಲಿ ಖಾನ್