ರಶ್ಮಿಕಾ ಮಂದಣ್ಣ ಆಯ್ತು ಈಗ ಶ್ರೀಲೀಲಾಗೂ ಶುರುವಾಯ್ತು ಕಾಟ

17DEC 2025

By  Manjunatha

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ಟಾಲಿವುಡ್​​ನಲ್ಲಿ ಟಾಪ್ ನಟಿಯಾಗಿ ಮೆರೆದು ಈಗ ಬಾಲಿವುಡ್​​ಗೆ ಹೋಗಿ ಅಲ್ಲಿಯೂ ಬೇಡಿಕೆಯ ನಟಿಯಾಗಿದ್ದಾರೆ.

ಬೇಡಿಕೆಯ ನಟಿಯಾಗಿದ್ದಾರೆ

ಆದರೆ ಇದೀಗ ಶ್ರೀಲೀಲಾ ಅವರಿಗೆ ಸಂಕಟವೊಂದು ಎದುರಾಗಿದೆ. ಕೆಲವು ಕಿಡಿಗೇಡಿಗಳು ನಟಿಗೆ ಕಿರುಕುಳ ನೀಡಿದ್ದಾರೆ.

      ಸಂಕಟ ಎದುರಾಗಿದೆ

ಎಐ ಬಳಸಿ ಶ್ರೀಲೀಲಾ ಅವರ ನಕಲಿ ಚಿತ್ರಗಳು ಮತ್ತು ವಿಡಿಯೋಗಳ ಸೃಷ್ಟಿಸಿ ಆನ್​ಲೈನ್​​ನಲ್ಲಿ ಹರಿ ಬಿಡಲಾಗಿದೆ.

   ನಕಲಿ ಚಿತ್ರ  ವಿಡಿಯೋ

ಕೆಲ ತಿಂಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರಿಗೂ ಇದೇ ರೀತಿಯ ಕಿರುಕುಳವನ್ನು ಕೆಲ ದುರುಳರು ನೀಡಿದ್ದರು.

ರಶ್ಮಿಕಾ ಮಂದಣ್ಣಗೂ ಸಹ

ಇದೀಗ ಶ್ರೀಲೀಲಾ ಅವರೂ ಸಹ ಅದೇ ರೀತಿಯ ಮಾನಸಿಕ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದೆ.

   ನಟಿಗೆ ಮಾನಸಿಕ ಹಿಂಸೆ

ಈ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಸಂದೇಶ ಹಂಚಿಕೊಂಡಿರುವ ನಟಿ, ಈ ರೀತಿಯ ಕೃತ್ಯದ ವಿರುದ್ಧ ನಿಲ್ಲುವಂತೆ ಕರೆ ನೀಡಿದ್ದಾರೆ.

      ಕರೆ ನೀಡಿದ್ದಾರೆ ನಟಿ

ಈ ಬಗ್ಗೆ ದೂರು ಸಹ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ ಶ್ರೀಲೀಲಾ.

    ದೂರು ದಾಖಲಿಸಿದ್ದಾರೆ