ಮೊದಲ ಹಿಂದಿ ಸಿನಿಮಾ ಚಿತ್ರೀಕರಣ ಮುಗಿಸಿದ ನಟಿ ಶ್ರೀಲೀಲಾ

14 May 2025

By  Manjunatha

ಕನ್ನಡತಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಈಗ ಬಾಲಿವುಡ್​ಗೂ ಕಾಲಿಟ್ಟಿದ್ದಾರೆ.

  ಕನ್ನಡತಿ ನಟಿ ಶ್ರೀಲೀಲಾ 

ಶ್ರೀಲೀಲಾ ಬಾಲಿವುಡ್​ಗೆ ಕಾಲಿಡುತ್ತಿದ್ದಂತೆ ಆಫರ್ ಮೇಲೆ ಆಫರ್​ಗಳು ಅವರಿಗೆ ಸಿಗುತ್ತಿವೆ.

   ಬಾಲಿವುಡ್​ಗೆ ಶ್ರೀಲೀಲಾ

ಇದೀಗ ನಟಿ ಶ್ರೀಲೀಲಾ ತಮ್ಮ ಮೊದಲ ಬಾಲಿವುಡ್ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ.

       ಬಾಲಿವುಡ್ ಸಿನಿಮಾ

ಶ್ರೀಲೀಲಾ, ‘ಆಶಿಖಿ 3’ ಸಿನಿಮಾನಲ್ಲಿ ನಟಿಸುತ್ತಿದ್ದು, ಆ ಸಿನಿಮಾದ ಬಹುಮುಖ್ಯ ಶೆಡ್ಯೂಲ್ ಮುಕ್ತಾಯವಾಗಿದೆ.

   ‘ಆಶಿಖಿ 3’ ಸಿನಿಮಾನಲ್ಲಿ

ಇನ್ನೊಂದು ಶೆಡ್ಯೂಲ್​ ಚಿತ್ರೀಕರಣ ಮಾತ್ರವೇ ಬಾಕಿ ಇದ್ದು, ಆ ಶೆಡ್ಯೂಲ್​ನಲ್ಲಿ ಶ್ರೀಲೀಲಾ ಭಾಗಿ ಆಗುತ್ತಿಲ್ಲ ಎನ್ನಲಾಗಿದೆ.

ತಮ್ಮ ಭಾಗ ಮುಗಿಸಿದ ನಟಿ

‘ಆಶಿಖಿ 3’ ಸಿನಿಮಾನಲ್ಲಿ ಕಾರ್ತಿಕ್ ಆರ್ಯನ್ ನಾಯಕ, ಶ್ರೀಲೀಲಾ ನಾಯಕಿ. ಇದು ಮ್ಯೂಸಿಕ್ ಲವ್ ಸ್ಟೋರಿ ಆಗಿದೆ.

ಕಾರ್ತಿಕ್ ಆರ್ಯನ್ ಹೀರೊ

‘ಆಶಿಖಿ 3’ ಸಿನಿಮಾದ ಬಳಿಕ ‘ದೋಸ್ತಾನಾ 3’ ಸಿನಿಮಾನಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಆ ಸಿನಿಮಾನಲ್ಲಿ ಸ್ಟಾರ್ ನಟರಿದ್ದಾರೆ.

  ‘ದೋಸ್ತಾನಾ 3’ ಸಿನಿಮಾ

ಅದರ ಬಳಿಕ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ನಟಿಸುತ್ತಿರುವ ಹೊಸ ಸಿನಿಮಾನಲ್ಲಿ ಶ್ರೀಲೀಲಾ ನಟಿಸಲಿದ್ದಾರೆ.

   ಸೈಫ್ ಅಲಿ ಖಾನ್ ಪುತ್ರ