ಪವನ್ ಕಲ್ಯಾಣ್​ ಸಿನಿಮಾಕ್ಕಾಗಿ ಇತರೆ ಸಿನಿಮಾಗಳ ಬದಿಗೊತ್ತಿದ ಶ್ರೀಲೀಲಾ

30 May 2025

By  Manjunatha

ಕನ್ನಡತಿ ಶ್ರೀಲೀಲಾ ತೆಲುಗು, ತಮಿಳು ಹಾಗೂ ಬಾಲಿವುಡ್​ ಚಿತ್ರರಂಗಗಳಲ್ಲಿ ಭಾರಿ ಬೇಡಿಕೆಯ ನಟಿಯಾಗಿದ್ದಾರೆ.

  ಕನ್ನಡತಿ ನಟಿ ಶ್ರೀಲೀಲಾ

ಇತ್ತೀಚೆಗೆ ಬಾಲಿವುಡ್​ಗೆ ಕಾಲಿಟ್ಟಿರುವ ಶ್ರೀಲೀಲಾ, ತೆಲುಗಿನಲ್ಲಂತೂ ಭಾರಿ ಬೇಡಿಕೆ ಹೊಂದಿದ್ದಾರೆ.

 ತೆಲುಗಿನಲ್ಲಿ ಭಾರಿ ಬೇಡಿಕೆ

ಮಹೇಶ್ ಬಾಬು, ರವಿತೇಜ, ಬಾಲಕೃಷ್ಣ, ರಾಮ್ ಅಂಥಹಾ ಸ್ಟಾರ್ ನಟರ ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾರೆ.

  ಸ್ಟಾರ್ ನಟರುಗಳೊಟ್ಟಿಗೆ

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೂ ಶ್ರೀಲೀಲಾ ನಾಯಕಿ ಆಗಿದ್ದರು. ಆದರೆ ಆ ಸಿನಿಮಾ ಅರ್ಧಕ್ಕೆ ನಿಂತಿತ್ತು.

    ಉಸ್ತಾದ್ ಭಗತ್ ಸಿಂಗ್

ಇದೀಗ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಚಿತ್ರೀಕರಣವನ್ನು ಮತ್ತೆ ಪ್ರಾರಂಭ ಮಾಡಲಾಗುತ್ತಿದೆ. ಶ್ರೀಲೀಲಾ ಅವರೇ ನಾಯಕಿ ಆಗಿ ಮುಂದುವರೆಯಲಿದ್ದಾರೆ.

ಚಿತ್ರೀಕರಣ ಮತ್ತೆ ಪ್ರಾರಂಭ

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕಾಗಿ ಇತರೆ ಸಿನಿಮಾಗಳನ್ನು ಬದಿಗೊತ್ತಿದ್ದಾರೆ ನಟಿ ಶ್ರೀಲೀಲಾ.

 ಸಿನಿಮಾ  ಬದಿಗೊತ್ತಿದ್ದಾರೆ

ಪವನ್ ಕಲ್ಯಾಣ್ ಬ್ಯುಸಿಯಾಗಿದ್ದು ಚಿತ್ರೀಕರಣಕ್ಕೆ ಹೆಚ್ಚು ಸಮಯ ಇಲ್ಲದ ಕಾರಣ, ಒಂದೇ ಬಾರಿ ಚಿತ್ರೀಕರಣ ಮಾಡಲು ಚಿತ್ರತಂಡ ಸಜ್ಜಾಗಿದೆ.

    ಪವನ್ ಕಲ್ಯಾಣ್ ಬ್ಯುಸಿ

ಇದೇ ಕಾರಣಕ್ಕೆ ಸತತವಾಗಿ ಒಂದು ತಿಂಗಳ ಡೇಟ್ಸ್ ಅನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಶ್ರೀಲೀಲಾ ನೀಡಿದ್ದಾರಂತೆ.

     ಒಂದು ತಿಂಗಳ ಡೇಟ್ಸ್