ಮೊದಲ ಸಿನಿಮಾ ಬಿಡುಗಡೆಗೆ ಮುಂಚೆಯೇ ತಮಿಳಿನಲ್ಲಿ ಮತ್ತೊಂದು ಅವಕಾಶ ಶ್ರೀಲೀಲಾಗೆ

12 NOV 2025

By  Manjunatha

ಕನ್ನಡದ ನಟಿ ಶ್ರೀಲೀಲಾ ಪರ ಭಾಷೆಗಳ ಸಿನಿಮಾಗಳಲ್ಲಿ ಬಲು ಬೇಡಿಕೆಯ ನಟಿ ಎನಿಸಿಕೊಳ್ಳುತ್ತಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ತೆಲುಗಿನಲ್ಲಿ ಟಾಪ್ ನಟಿಯಾಗಿ ಮೆರೆದು ಬಾಲಿವುಡ್​ಗೆ ಕಾಲಿಟ್ಟಿದ್ದು, ಅಲ್ಲಿಯೂ ಒಂದರ ಹಿಂದೊಂದು ಸಿನಿಮಾ ಬಾಚಿಕೊಳ್ಳುತ್ತಿದ್ದಾರೆ.

   ತೆಲುಗಿನಲ್ಲಿ ಟಾಪ್ ನಟಿ

ಇತ್ತೀಚೆಗಷ್ಟೆ ತಮಿಳು ಚಿತ್ರರಂಗಕ್ಕೆ ಶ್ರೀಲೀಲಾ ಕಾಲಿಟ್ಟಿದ್ದು, ಅವರ ಮೊದಲ ತಮಿಳು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.

      ತಮಿಳು ಚಿತ್ರರಂಗಕ್ಕೆ

ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ತಮಿಳು ಸಿನಿಮಾನಲ್ಲಿ ಶ್ರೀಲೀಲಾ ನಟಿಸಿದ್ದು, ಮುಂದಿನ ವರ್ಷ ಜನವರಿಗೆ ಸಿನಿಮಾ ಬಿಡುಗಡೆ ಆಗಲಿದೆ.

‘ಪರಾಶಕ್ತಿ’ ತಮಿಳು ಸಿನಿಮಾ

ಇದೀಗ ಶ್ರೀಲೀಲಾಗೆ ಮತ್ತೊಂದು ತಮಿಳು ಸಿನಿಮಾ ಅವಕಾಶ ಒದಗಿಬಂದಿದೆ. ಅದೂ ಶಿವಕಾರ್ತಿಕೇಯನ್ ಜೊತೆಗೆ.

 ಮತ್ತೊಂದು ತಮಿಳು ಚಿತ್ರ

ಶಿವಕಾರ್ತಿಕೇಯನ್ ನಟಿಸಿ, ಸಿರಿಲ್ ಚಂದ್ರಕಾಂತ್ ನಿರ್ದೇಶನ ಮಾಡಲಿರುವ ಹೊಸ ತಮಿಳು ಸಿನಿಮಾಕ್ಕೆ ಶ್ರೀಲೀಲಾ ನಾಯಕಿ.

      ನಿರ್ದೇಶಕ ಯಾರು?

ಶ್ರೀಲೀಲಾ ಅವರ ನಟನೆ, ಅವರ ವೃತ್ತಿಪರತೆ ನೋಡಿ ಶಿವಕಾರ್ತಿಕೇಯನ್ ಅವರೇ ಹೊಸ ಸಿನಿಮಾಕ್ಕೆ ರೆಫರ್ ಮಾಡಿದ್ದಾರೆ.

  ಹೊಸ ಸಿನಿಮಾಕ್ಕೆ ರೆಫರ್

ಆ ಮೂಲಕ ಮೊದಲ ತಮಿಳು ಸಿನಿಮಾ ಬಿಡುಗಡೆಗೆ ಮುಂಚೆಯೇ ಶ್ರೀಲೀಲಾಗೆ ಮತ್ತೊಂದು ತಮಿಳು ಸಿನಿಮಾ ಆಫರ್ ಆಗಿದೆ.

      ಶ್ರೀಲೀಲಾಗೆ ಅದೃಷ್ಟ