ಶ್ರೀಲೀಲಾಗೆ ಸಿಕ್ಕಿದೆ ಅದ್ಭುತವಾದ ಪಾತ್ರ, ಜೀವ ತುಂಬಬಲ್ಲರೇ?

29 OCT 2025

By  Manjunatha

ಕನ್ನಡತಿ ಶ್ರೀಲೀಲಾ ಇದೀಗ ತೆಲುಗು, ತಮಿಳು ಮತ್ತು ಬಾಲಿವುಡ್ ಚಿತ್ರರಂಗಗಳಲ್ಲಿ ಮಿಂಚುತ್ತಿದ್ದಾರೆ.

      ಕನ್ನಡತಿ ಶ್ರೀಲೀಲಾ

ಇಷ್ಟು ವರ್ಷ ಬಬ್ಲಿ, ಹೊಮ್ಲಿ, ಗ್ಲಾಮರಸ್ ಪಾತ್ರಗಳಲ್ಲೇ ಶ್ರೀಲೀಲಾ ನಟಿಸುತ್ತಾ ಬಂದಿದ್ದಾರೆ.

   ಗ್ಲಾಮರಸ್ ಪಾತ್ರಗಳಲ್ಲೇ

ಒಳ್ಳೆಯ ನಟಿಯೂ ಆಗಿರುವ ಶ್ರೀಲೀಲಾಗೆ ಅವರ ನಟನೆಗೆ ಸವಾಲಾಗುವ ಪಾತ್ರ ಸಿಕ್ಕಿದ್ದೇ ಇಲ್ಲ.

      ಪಾತ್ರ ಸಿಕ್ಕಿದ್ದೇ ಇಲ್ಲ

ಆದರೆ ಇದೇ ಮೊದಲ ಬಾರಿಗೆ ಶ್ರೀಲೀಲಾಗೆ ಬಹಳ ಗಟ್ಟಿಯಾದ ಪಾತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

       ಗಟ್ಟಿಯಾದ ಪಾತ್ರ

2009 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ‘ಅರುಂಧತಿ’ ಸಿನಿಮಾ ಇದೀಗ ಹಿಂದಿಗೆ ರೀಮೇಕ್ ಆಗುತ್ತಿದೆ.

     ‘ಅರುಂಧತಿ’ ಸಿನಿಮಾ

‘ಅರುಂಧತಿ’ ಸಿನಿಮಾದ ಹಿಂದಿ ರೀಮೇಕ್​​ನಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ಇದು ಅತ್ಯುತ್ತಮ ನಟನೆ ಬೇಡುವ ಪಾತ್ರ.

       ಶ್ರೀಲೀಲಾ ನಾಯಕಿ

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ‘ಅರುಂಧತಿ’ ಸಿನಿಮಾವನ್ನು ಹಿಂದಿಗೆ ಕೊಂಡೊಯ್ಯುತ್ತಿದ್ದಾರೆ.

    ಅಲ್ಲು ಅರ್ಜುನ್ ತಂದೆ

ಈಗಾಗಲೇ ಹಿಂದಿಯ ಕೆಲ ಸಿನಿಮಾಗಳಲ್ಲಿ ನಟಿಸುತ್ತಿರುವ ಶ್ರೀಲೀಲಾಗೆ ಇದು ನಿಜಕ್ಕೂ ಸವಾಲಿನ ಪಾತ್ರ ಆಗಲಿದೆ.

  ನಿಜಕ್ಕೂ ಸವಾಲಿನ ಪಾತ್ರ