ಬಾಲಿವುಡ್ ಸ್ಟಾರ್ ನಟಿಯ ಪಾತ್ರ ಕಸಿದುಕೊಂಡ ನಟಿ ಶ್ರೀಲೀಲಾ

03 OCT 2025

By  Manjunatha

ಕನ್ನಡದಿಂದ ನಟನೆ ಆರಂಭಿಸಿದ ಬೆಂಗಳೂರಿನ ಹುಡುಗಿ ಶ್ರೀಲೀಲಾ ಈಗ ಬಾಲಿವುಡ್​​ನಲ್ಲಿ ಮಿಂಚುತ್ತಿದ್ದಾರೆ.

    ಬೆಂಗಳೂರಿನ ಹುಡುಗಿ

ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮೆರೆದು ಈಗ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ ಶ್ರೀಲೀಲಾ.

   ತೆಲುಗು ಚಿತ್ರರಂಗದಲ್ಲಿ

ಶ್ರೀಲೀಲಾ ನಟನೆಯ ಒಂದೂ ಹಿಂದಿ ಸಿನಿಮಾ ಬಿಡುಗಡೆ ಆಗಿಲ್ಲ, ಆದರೆ ಅದಕ್ಕೆ ಮುಂಚೆಯೇ ಬಲು ಬೇಡಿಕೆ ಕುದುರಿದೆ.

   ಬಲು ಬೇಡಿಕೆ ಕುದುರಿದೆ

ಈಗಾಗಲೇ ಮೂರು ಹೊಸ ಹಿಂದಿ ಸಿನಿಮಾಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಒಂದು ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ.

    ಹೊಸ ಹಿಂದಿ ಸಿನಿಮಾ

ಶ್ರೀಲೀಲಾ ಇದೀಗ ಖ್ಯಾತ ಬಾಲಿವುಡ್ ನಟಿ ನಟಿಸಬೇಕಿದ್ದ ಪಾತ್ರವನ್ನು ತಮ್ಮತ್ತ ಸೆಳೆದುಕೊಂಡಿದ್ದಾರಂತೆ.

    ಖ್ಯಾತ ಬಾಲಿವುಡ್ ನಟಿ

ಕಿಯಾರಾ ಅಡ್ವಾಣಿ ನಟಿಸಬೇಕಿದ್ದು ದೊಡ್ಡ ಬಜೆಟ್​​ನ ಹಿಂದಿ ಸಿನಿಮಾನಲ್ಲಿ ಈಗ ಶ್ರೀಲೀಲಾ ನಟಿಸುತ್ತಿದ್ದಾರೆ.

  ನಟಿ ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ಇತ್ತೀಚೆಗಷ್ಟೆ ತಾಯಿ ಆಗಿದ್ದು, ಹಾಗಾಗಿ ಅವರು ಒಪ್ಪಿಕೊಂಡ ಸಿನಿಮಾದಿಂದ ಹೊರಬಂದಿದ್ದು, ಆ ಪಾತ್ರ ಶ್ರೀಲೀಲಾ ಪಾಲಾಗಿದೆ.

ಇತ್ತೀಚೆಗ ತಾಯಿ ಆಗಿದ್ದಾರೆ

ಅಲ್ಲಿಗೆ ಇದೀಗ ಶ್ರೀಲೀಲಾ ಕೈಯಲ್ಲಿ ನಾಲ್ಕು ಹಿಂದಿ ಸಿನಿಮಾಗಳು ಇವೆ. ಒಂದು ಸಿನಿಮಾ ಇದೇ ವರ್ಷ ಬಿಡುಗಡೆ ಆಗಲಿದೆ.

    ನಾಲ್ಕು ಹಿಂದಿ ಸಿನಿಮಾ