ಮೆಚ್ಚಿನ ನಟನೊಟ್ಟಿಗೆ ಚಿತ್ರೀಕರಣದಲ್ಲಿ ಶ್ರೀಲೀಲಾ ಖುಷಿಯೋ ಖುಷಿ

30 July 2025

By  Manjunatha

ಶ್ರೀಲೀಲಾ, ಇದೀಗ ಪ್ಯಾನ್ ಇಂಡಿಯಾ ನಟಿ. ದಕ್ಷಿಣ ಹಾಗೂ ಉತ್ತರ ಭಾರತ ಎರಡೂ ಚಿತ್ರರಂಗಗಳಲ್ಲಿ ಬ್ಯುಸಿ.

   ಪ್ಯಾನ್ ಇಂಡಿಯಾ ನಟಿ

ಶ್ರೀಲೀಲಾ ಕೈಯಲ್ಲಿ ಏನಿಲ್ಲವೆಂದರೂ ಕನಿಷ್ಟ ಆರರಿಂದ ಏಳು ಸಿನಿಮಾಗಳು ಪ್ರಸ್ತುತ ಇವೆ.

  ಆರರಿಂದ ಏಳು ಸಿನಿಮಾ

ಇದೀಗ ಶ್ರೀಲೀಲಾ ತಮ್ಮ ಮೆಚ್ಚಿನ ನಟನ ಜೊತೆಗೆ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

    ಚಿತ್ರೀಕರಣದಲ್ಲಿ ಭಾಗಿ

ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರೊಟ್ಟಿಗೆ ಸಿನಿಮಾ ಚಿತ್ರೀಕರಣದಲ್ಲಿ ಅವರು ಭಾಗಿ ಆಗಿದ್ದಾರೆ.

 ಡಿಸಿಎಂ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ಅವರಿಗಾಗಿ ತಮ್ಮ ಶೇಡ್ಯೂಲ್ ಡೇಟ್ಸ್​ಗಳನ್ನು ಸಹ ಬದಲಾವಣೆ ಮಾಡಿಕೊಂಡಿದ್ದಾರೆ ನಟಿ.

ಪವನ್ ಕಲ್ಯಾಣ್ ಅವರಿಗಾಗಿ

ಚಿತ್ರೀಕರಣ ಸಮಯವನ್ನು ಹೆಚ್ಚಿಗೆ ಮಾಡಿಕೊಂಡಿದ್ದಾರೆ. ಸತತವಾಗಿ ಒಂದು ತಿಂಗಳ ಕಾಲ ಒಂದೇ ಸಿನಿಮಾಕ್ಕೆ ಡೇಟ್ಸ್ ನೀಡಿದ್ದಾರೆ.

ಚಿತ್ರೀಕರಣ ಸಮಯ ಹೆಚ್ಚು

ಪವನ್ ಕಲ್ಯಾಣ್ ನಾಯಕರಾಗಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ.

    ಉಸ್ತಾದ್ ಭಗತ್ ಸಿಂಗ್

ಆಂಧ್ರ ಪ್ರದೇಶದಲ್ಲಿಯೇ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಇನ್ನು ಕೆಲವೆ ದಿನಗಳಲ್ಲಿ ಚಿತ್ರೀಕರಣ ಮುಗಿಯಲಿದೆಯಂತೆ.

    ಸಿನಿಮಾದ ಚಿತ್ರೀಕರಣ