ತೆಲುಗು ಚಿತ್ರರಂಗದ ವಿರೋಧ ಕಟ್ಟಿಕೊಂಡರೇ ನಟಿ ಶ್ರೀಲಿಲಾ

06 July 2025

By  Manjunatha

ಕನ್ನಡದ ನಟಿ ಶ್ರೀಲೀಲಾ, ಈಗ ಮಿಂಚುತ್ತಿರುವುದು ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ.

  ಕನ್ನಡದ ನಟಿ ಶ್ರೀಲೀಲಾ

ಆದರೆ ಬಾಲಿವುಡ್​ಗೆ ಇತ್ತೀಚೆಗಷ್ಟೆ ಪದಾರ್ಪಣೆ ಮಾಡಿರುವ ಶ್ರೀಲೀಲಾ ಅವರ ಒಂದೂ ಹಿಂದಿ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ.

 ಬಾಲಿವುಡ್​ಗೆ ಪದಾರ್ಪಣೆ

ಆದರೆ ಆವರಿಗೆ ಬಾಲಿವುಡ್​ನಲ್ಲಿ ಒಂದರ ಹಿಂದೊಂದು ದೊಡ್ಡ ಆಫರ್​​ಗಳು ಬರುತ್ತಿವೆ. ಆದರೆ ಇದೇ ಅವರ ಸಮಸ್ಯೆಗೆ ಕಾರಣ ಆಗಿದೆ.

     ಒಂದರ ಹಿಂದೊಂದು

ಶ್ರೀಲೀಲಾ ಅವರು ಬಾಲಿವುಡ್ ಸಿನಿಮಾ ಅವಕಾಶಗಳಿಗಾಗಿ ತೆಲುಗು ಸಿನಿಮಾ ಅವಕಾಶಗಳನ್ನು ಕೈ ಬಿಡುತ್ತಿದ್ದಾರೆ.

   ಬಾಲಿವುಡ್ ಸಿನಿಮಾಗಳು

ಇತ್ತೀಚೆಗಷ್ಟೆ ಶ್ರೀಲೀಲಾ, ತಾವು ಒಪ್ಪಿಕೊಂಡಿದ್ದ ಎರಡು ಸಿನಿಮಾ ಅವಕಾಶಗಳನ್ನು ಕೈಬಿಟ್ಟಿದ್ದಾರಂತೆ.

    ಸಿನಿಮಾ ಕೈಬಿಟ್ಟ ನಟಿ

ಆದರೆ ಇದು ಕೆಲ ತೆಲುಗು ಸಿನಿಮಾ ನಿರ್ಮಾಪಕರು, ನಿರ್ದೇಶಕರನ್ನು ಕೆರಳಿಸಿದ್ದು, ಕಲಾವಿದರ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ಹೋಗಿದೆ.

ನಿರ್ಮಾಪಕ ಅಸಮಾಧಾನ

ಶ್ರೀಲೀಲಾ ಅವರನ್ನು ತೆಲುಗು ಸಿನಿಮಾಗಳಿಗೆ ತೆಗೆದುಕೊಳ್ಳದೇ ಇರಲು ಕೆಲವು ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

 ಟಾಲಿವುಡ್​ನಿಂದ ನಿಷೇಧ

ನಟಿ ಪೂಜಾ ಹೆಗ್ಡೆ ರೀತಿ ಶ್ರೀಲೀಲಾಗೂ ಸಹ ತೆಲುಗು ಚಿತ್ರರಂಗ ಅಘೋಷಿತ ನಿಷೇಧ ಹೇರುವ ಸಾಧ್ಯತೆ ಇದೆ.

       ಪೂಜಾ ಹೆಗ್ಡೆ ರೀತಿ