ಮತ್ತೊಂದು ತೆಲುಗು ಸಿನಿಮಾ ಅವಕಾಶ ಕಳೆದುಕೊಂಡ ನಟಿ ಶ್ರೀಲೀಲಾ?

24 Apr 2025

By  Manjunatha

ಕರ್ನಾಟಕ ಮೂಲದ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

 ಕರ್ನಾಟಕ ಮೂಲದ ನಟಿ

ಆದರೆ ಬಾಲಿವುಡ್ ಆಸೆಗೆ ಬಿದ್ದು ಇತ್ತೀಚೆಗೆ ತೆಲುಗು ಸಿನಿಮಾಗಳ ಬಗ್ಗೆ ತುಸು ತಾತ್ಸಾರ ತೋರಿದ್ದಾರೆ ಎನ್ನಲಾಗುತ್ತಿದೆ.

     ತೆಲುಗು ಬಗ್ಗೆ ತಾತ್ಸಾರ

ಈಗಾಗಲೇ ವಿಜಯ್ ದೇವರಕೊಂಡ ಜೊತೆಗಿನ ಒಂದು ತೆಲುಗು ಸಿನಿಮಾ ಅವಕಾಶ ಕಳೆದುಕೊಂಡಿದ್ದರು ನಟಿ ಶ್ರೀಲೀಲಾ.

ಒಂದು ಸಿನಿಮಾ ಕೈತಪ್ಪಿದೆ

ಇದೀಗ ಮತ್ತೊಂದು ತೆಲುಗು ಸಿನಿಮಾ ಅವಕಾಶ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದೂ ಸ್ಟಾರ್ ನಟನ ಸಿನಿಮಾ.

ನಟಿಯ ಅವಕಾಶ ಕೈತಪ್ಪಿದೆ

ಶ್ರೀಲೀಲಾಗೆ ತೆಲುಗು ಚಿತ್ರರಂಗದಲ್ಲಿ ಬ್ರೇಕ್ ಕೊಟ್ಟಿದ್ದ ರವಿತೇಜ ಜೊತೆಗಿನ ಸಿನಿಮಾ ಧಮಾಕ. ಈಗ ಮತ್ತೆ ರವಿತೇಜ ಜೊತೆಗೆ ನಟಿಸುವ ಅವಕಾಶ ಬಂದಿತ್ತು.

ಹಿಟ್ ನೀಡಿದ್ದ ಸ್ಟಾರ್ ನಟ

ಆದರೆ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಕಾರಣ ರವಿತೇಜ ಅವರ ಸಿನಿಮಾ ಅವಕಾಶವನ್ನು ಕೈಬಿಟ್ಟಿದ್ದಾರಂತೆ ಶ್ರೀಲೀಲಾ.

    ಬಾಲಿವುಡ್​ನಲ್ಲಿ ಬ್ಯುಸಿ

ಶ್ರೀಲೀಲಾ ಪ್ರಸ್ತುತ ಬಾಲಿವುಡ್​ನ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿಕ್ ಆರ್ಯನ್ ಹಾಗೂ ಇಬ್ರಾಹಿಂ ಅಲಿ ಖಾನ್ ಜೊತೆ ನಟಿಸುತ್ತಿದ್ದಾರೆ.

ಕಾರ್ತಿಕ್ ಆರ್ಯನ್ ಜೊತೆ

ಅದರ ಹೊರತಾಗಿ ತೆಲುಗಿನ ಎರಡು ಸಿನಿಮಾಗಳು ಹಾಗೂ ತಮಿಳಿನ ಒಂದು ಸಿನಿಮಾ ಶ್ರೀಲೀಲಾ ಕೈಯಲ್ಲಿದೆ.

   ಯಾವ ಸಿನಿಮಾಗಳಿವೆ?