ಒಟಿಟಿಗೆ ಬರಲಿದೆ ಶ್ರೀಲೀಲಾ ನಟನೆಯ ಹೊಸ ಸಿನಿಮಾ, ಯಾವಾಗ?

25 NOV 2025

By  Manjunatha

ಶ್ರೀಲೀಲಾ ಕನ್ನಡದ ನಟಿ ಆದರೆ ಇತ್ತೀಚೆಗೆ ಅವರು ಹೆಚ್ಚು ಮಿಂಚುತ್ತಿರುವುದು ತೆಲುಗು ಹಾಗೂ ಬಾಲಿವುಡ್​​ನಲ್ಲಿ.

  ಕನ್ನಡದ ನಟಿ ಶ್ರೀಲೀಲಾ

ತೆಲುಗಿನಲ್ಲಿ ಟಾಪ್ ನಟಿಯಾಗಿ ಶ್ರೀಲೀಲಾ ಗುರುತಿಸಿಕೊಂಡಿದ್ದು, ಶ್ರೀಲೀಲಾರ ಡ್ಯಾನ್ಸ್, ನಟನೆಯನ್ನು ತೆಲುಗು ಪ್ರೇಕ್ಷಕರು ಮೆಚ್ಚಿದ್ದಾರೆ.

   ತೆಲುಗಿನಲ್ಲಿ ಟಾಪ್ ನಟಿ

ಕಳೆದ ತಿಂಗಳು ಶ್ರೀಲೀಲಾ ನಟನೆಯ ತೆಲುಗು ಸಿನಿಮಾ ‘ಮಾಸ್ ಜಾತರ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಗಳಿಸಿತು.

  ‘ಮಾಸ್ ಜಾತರ’ ಸಿನಿಮಾ

ರವಿತೇಜ ‘ಮಾಸ್ ಜಾತರ’ ಸಿನಿಮಾನಲ್ಲಿ ನಾಯಕನಾಗಿ ನಟಿಸಿದ್ದರು. ಶ್ರೀಲೀಲಾ ಅವರೊಟ್ಟಿಗೆ ಇದು ಅವರ ಎರಡನೇ ಸಿನಿಮಾ.

       ರವಿತೇಜ ಜೊತೆಗೆ

ಇದೀಗ ‘ಮಾಸ್ ಜಾತರ’ ಸಿನಿಮಾ ಒಟಿಟಿಗೆ ಬರುತ್ತಿದೆ. ರವಿತೇಜ ಮತ್ತು ಶ್ರೀಲೀಲಾ ಅಭಿಮಾನಿಗಳು ಮನೆಯಲ್ಲೇ ಕೂತು ಸಿನಿಮಾ ನೋಡಬಹುದಾಗಿದೆ.

ರವಿತೇಜ ಮತ್ತು ಶ್ರೀಲೀಲಾ

‘ಮಾಸ್ ಜಾತರ’ ಸಿನಿಮಾ ನವೆಂಬರ್ 27ರಂದು ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಲಿದೆ. ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ನೋಡಬಹುದಾಗಿದೆ.

     ಯಾವ ಒಟಿಟಿಯಲ್ಲಿ?

‘ಮಾಸ್ ಜಾತರ’ ಸಿನಿಮಾ ಅಕ್ಟೋಬರ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಸಿನಿಮಾ ಸಾಧಾರಣ ಯಶಸ್ಸು ಗಳಿಸಿತ್ತು.

      ಸಾಧಾರಣ ಯಶಸ್ಸು

‘ಮಾಸ್ ಜಾತರ’ ಸಿನಿಮಾನಲ್ಲಿ ಶ್ರೀಲೀಲಾ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ನಟನೆಯೂ ಸಹ ಚೆನ್ನಾಗಿದೆ.

  ಶ್ರೀಲೀಲಾ ಸಖತ್ ಡ್ಯಾನ್ಸ್