ಶ್ರೀಲೀಲಾಗೆ ನೇರ ಸ್ಪರ್ಧೆ ಒಡ್ಡುತ್ತಿರುವ ಭಾಗ್ಯಶ್ರೀ ಬೋರ್ಸೆ, ಯಾರೀಕೆ?

25 June 2025

By  Manjunatha

ನಟಿ ಶ್ರೀಲೀಲಾ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು, ಇತ್ತೀಚೆಗೆ ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.

   ಶ್ರೀಲೀಲಾ ಬಾಲಿವುಡ್​ಗೆ

ಆದರೆ ಶ್ರೀಲೀಲಾ ಬಿಟ್ಟ ಸಿನಿಮಾಗಳು ನಟಿ ಭಾಗ್ಯಶ್ರೀ ಬೋರ್ಸೆ ಪಾಲಾಗುತ್ತಿವೆ. ಎರಡನೇ ಬಾರಿ ಶ್ರೀಲೀಲಾ ಅವಕಾಶವನ್ನು ಭಾಗ್ಯಶ್ರೀ ಬಾಚಿಕೊಂಡಿದ್ದಾರೆ.

   ನಟಿ ಭಾಗ್ಯಶ್ರೀ ಬೋರ್ಸೆ

ಮೊದಲಿಗೆ ವಿಜಯ್ ದೇವರಕೊಂಡ ನಟನೆಯ ‘ಕಿಂಗ್​ಡಮ್’ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿಯಾಗಿದ್ದರು.

   ವಿಜಯ್ ದೇವರಕೊಂಡ

ಆದರೆ ಅವರು ಆ ಸಿನಿಮಾ ಬಿಟ್ಟು ಹೊರಬಂದರು, ನಾಯಕಿ ಸ್ಥಾನಕ್ಕೆ ಭಾಗ್ಯಶ್ರೀ ಬಂದು, ಸಿನಿಮಾ ಬಿಡುಗಡೆ ಆಗಲಿದೆ.

ನಾಯಕಿ ಸ್ಥಾನಕ್ಕೆ ಭಾಗ್ಯಶ್ರೀ

ಇದೀಗ ಶ್ರೀಲೀಲಾ, ಅಕ್ಕಿನೇನಿ ನಿಖಿಲ್ ನಟನೆಯ ‘ಲೆನಿನ್’ ಸಿನಿಮಾಕ್ಕೂ ಸಹ ನಾಯಕಿಯಾಗಿ ಆಯ್ಕೆ ಆಗಿದ್ದರು.

ನಿಖಿಲ್ ನಟನೆಯ ‘ಲೆನಿನ್

ಬಾಲಿವುಡ್ ಸಿನಿಮಾ ಒಂದಕ್ಕಾಗಿ ‘ಲೆನಿನ್’ ಸಿನಿಮಾ ಅವಕಾಶವನ್ನು ಸಹ ಶ್ರೀಲೀಲಾ ತ್ಯಜಿಸಿದ್ದಾರೆ.

ಲೆನಿನ್ ಚಿತ್ರದಿಂದ ಹೊರಕ್ಕೆ

ಈಗ ‘ಲೆನಿನ್’ ಸಿನಿಮಾ ಅವಕಾಶವೂ ಸಹ ನಟಿ ಭಾಗ್ಯಶ್ರೀ ಬೋರ್ಸೆ ಪಾಲಾಗಿದೆ. ಒಳ್ಳೆ ಸಂಭಾವನೆಯೂ ಸಿಗುತ್ತಿದೆ. 

ಭಾಗ್ಯಶ್ರೀ ಬೋರ್ಸೆ ಪಾಲು

ಹಿಂದಿ ಸಿನಿಮಾದಿಂದ ನಟನೆ ಆರಂಭಿಸಿದ ಭಾಗ್ಯಶ್ರೀ ಬೋರ್ಸೆ ಈಗ ತೆಲುಗು ಚಿತ್ರರಂಗದಲ್ಲಿ ಸೆಟಲ್ ಆಗಲು ನೋಡುತ್ತಿದ್ದಾರೆ.

    ಹಿಂದಿ ಚಿತ್ರರಂಗದಿಂದ