ರಣ್ವೀರ್ ಸಿಂಗ್ ಜೊತೆ ಕಾಣಿಸಿಕೊಂಡ ಶ್ರೀಲೀಲಾ: ಸಿನಿಮಾ ಮಾತುಕತೆ?

07 July 2026

By  Manjunatha

ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ನಟಿಯಾಗುವ ಹೊಸ್ತಿಲಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳಿನ ಬಳಿಕ ಹಿಂದಿಗೂ ಕಾಲಿರಿಸಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ಶ್ರೀಲೀಲಾರ ಮೊದಲ ಬಾಲಿವುಡ್ ಸಿನಿಮಾ ಬಿಡುಗಡೆ ಆಗುವ ಮೊದಲೇ ಹಲವು ಅವಕಾಶಗಳು ಅವರನ್ನು ಅರಸಿ ಬಂದಿವೆ.

    ಬಾಲಿವುಡ್ ಸಿನಿಮಾ

ಇದೀಗ ಶ್ರೀಲೀಲಾ, ಬಾಲಿವುಡ್​ ಸ್ಟಾರ್ ನಟ ರಣ್ವೀರ್ ಸಿಂಗ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಚಿತ್ರ ನೋಡಿದವರು ಇದು ಸಿನಿಮಾ ಮಾತುಕತೆ ಎಂದು ಊಹಿಸಿದ್ದಾರೆ.

    ರಣ್ವೀರ್ ಸಿಂಗ್ ಜೊತೆ

ಖುದ್ದು ನಟಿ ಶ್ರೀಲೀಲಾ ಅವರು ರಣ್ವೀರ್ ಸಿಂಗ್ ಅವರೊಟ್ಟಿಗೆ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

     ಶ್ರೀಲೀಲಾ ಚಿತ್ರಗಳು

ಆದರೆ ಇದು ಯಾವುದೇ ಸಿನಿಮಾದ ಮಾತುಕತೆ ಅಲ್ಲ, ಬದಲಿಗೆ ಮುಂಬೈನಲ್ಲಿ ನಡೆದ ಇವೆಂಟ್​​ನಲ್ಲಿ ಈ ಜೋಡಿ ಭಾಗಿ ಆಗಿತ್ತು.

     ಜೋಡಿ ಭಾಗಿ ಆಗಿತ್ತು

ಅಂದಹಾಗೆ ಈ ಹಿಂದೆಯೇ ನಟಿ ಶ್ರೀಲೀಲಾ ಮತ್ತು ರಣ್ವೀರ್ ಸಿಂಗ್ ಅವರುಗಳು ಜಾಹೀರಾತೊಂದರಲ್ಲಿ ಒಟ್ಟಿಗೆ ನಟಿಸಿದ್ದಾರೆ.

    ಜಾಹೀರಾತೊಂದರಲ್ಲಿ

ಇತ್ತೀಚೆಗಷ್ಟೆ ಶ್ರೀಲೀಲಾ, ರಣ್ವೀರ್ ಸಿಂಗ್ ನಟನೆಯ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.

ಸೂಪರ್ ಹೀರೋ ಸಿನಿಮಾ

ಶ್ರೀಲೀಲಾ ಒಟ್ಟಿಗೆ ಮೂರು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಮೊದಲ ಹಿಂದಿ ಸಿನಿಮಾ ಬಿಡುಗಡೆ ಆಗಲಿದೆ.

   ಮೂರು ಹಿಂದಿ ಸಿನಿಮಾ