ಬಾಲಿವುಡ್​ ಸ್ಟಾರ್ ಜೊತೆ ಸಿನಿಮಾ, ಏಜೆಂಟ್ ಮಿರ್ಚಿ ಆದ ಶ್ರೀಲೀಲಾ

15 OCT 2025

By  Manjunatha

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.

   ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾ ನಟನೆಯ ಒಂದೇ ಒಂದು ಹಿಂದಿ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ, ಆದರೆ ಬೇಡಿಕೆ ಮಾತ್ರ ಸಾಕಷ್ಟಿದೆ.

 ಸಿನಿಮಾ ಬಿಡುಗಡೆ ಆಗಿಲ್ಲ

ಈಗಾಗಲೇ ಶ್ರೀಲೀಲಾ ಬರೋಬ್ಬರಿ ನಾಲ್ಕು ಹೊಸ ಹಿಂದಿ ಸಿನಿಮಾಗಳಿಗೆ ಸಹಿ ಹಾಕಿದ್ದು, ಒಂದರ ಚಿತ್ರೀಕರಣ ಮುಗಿಸಿದ್ದಾರೆ.

 ಕೈಯಲ್ಲಿರುವ ಹಿಂದಿ ಚಿತ್ರ

ಇದೀಗ ಬಾಲಿವುಡ್​ನ ಸ್ಟಾರ್ ನಟನ ಜೊತೆಗೆ ಹೊಸ ಸಿನಿಮಾಕ್ಕೆ ಎಸ್ ಹೇಳಿದ್ದು, ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ.

 ಬಾಲಿವುಡ್​ ಸ್ಟಾರ್ ಜೊತೆ

ಬಾಬಿ ಡಿಯೋಲ್ ನಟಿಸುತ್ತಿರುವ ಹೊಸ ಆಕ್ಷನ್ ಸಿನಿಮಾನಲ್ಲಿ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

  ಪ್ರಮುಖ ಪಾತ್ರದಲ್ಲಿ ನಟಿ

ಬಾಬಿ ಡಿಯೋಲ್ ಹಾಗೂ ಇನ್ನೂ ಹಲವು ನಟ-ನಟಿಯರು ನಟಿಸಲಿರುವ ಆಕ್ಷನ್-ಕಾಮಿಡಿ ಸಿನಿಮಾ ಇದಾಗಿದೆ.

 ಆಕ್ಷನ್-ಕಾಮಿಡಿ ಸಿನಿಮಾ

ಈ ಹೊಸ ಆಕ್ಷನ್-ಕಾಮಿಡಿ ಸಿನಿಮಾನಲ್ಲಿ ಶ್ರೀಲೀಲಾ ಏಜೆಂಟ್ ಮಿರ್ಚಿ ಹೆಸರಿನ ಪಾತ್ರದಲ್ಲಿ ನಟಿಸಲಿದ್ದಾರೆ.

   ಏಜೆಂಟ್ ಮಿರ್ಚಿ ಪಾತ್ರ

ಸಿನಿಮಾದ ಪೋಸ್ಟರ್ ಅನ್ನು ಶ್ರೀಲೀಲಾ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶುಭ ಕೋರಿದ್ದಾರೆ.

   ಇನ್​​ಸ್ಟಾಗ್ರಾಂನಲ್ಲಿ ಚಿತ್ರ