ಮತ್ತೆ ಹಿಂದಿ ಸಿನಿಮಾ ಶೂಟಿಂಗ್ ಶುರು ಮಾಡಿದ ನಟಿ ಶ್ರೀಲೀಲಾ

16 AUG 2026

By  Manjunatha

ಶ್ರೀಲೀಲಾ, ಕನ್ನಡದ ನಟಿ ಆದರೆ ಈಗ ಅವರು ಪರ ಭಾಷೆ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

  ಶ್ರೀಲೀಲಾ, ಕನ್ನಡದ ನಟಿ

ಶ್ರೀಲೀಲಾ ತೆಲುಗಿನಲ್ಲಿ ಟಾಪ್ ನಟಿಯಾಗಿ ಮೆರೆದು ತಮಿಳು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ತೆಲುಗು, ತಮಿಳು ಸಿನಿಮಾ

ಶ್ರೀಲೀಲಾ ಹಿಂದಿ ಸಿನಿಮಾ ಒಪ್ಪಿಕೊಂಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ ಆದರೆ ಆ ಸಿನಿಮಾ ಅರ್ಧಕ್ಕೆ ನಿಂತಿತ್ತು.

ಅರ್ಧಕ್ಕೆ ನಿಂತಿತ್ತು ಸಿನಿಮಾ

ಶ್ರೀಲೀಲಾ, ಕಾರ್ತಿಕ್ ಆರ್ಯನ್ ಜೊತೆಗೆ ‘ಆಶಿಖಿ 3’ ಸಿನಿಮಾನಲ್ಲಿ ನಟಿಸಲು ಆರಂಭಿಸಿದ್ದರು.

   ‘ಆಶಿಖಿ 3’ ಸಿನಿಮಾನಲ್ಲಿ

‘ಆಶಿಖಿ 3’ ಸಿನಿಮಾ ಅನ್ನು ಅನುರಾಗ್ ಬಸು ನಿರ್ದೇಶನ ಮಾಡುತ್ತಿದ್ದರು. ಆದರೆ ಅಚಾನಕ್ಕಾಗಿ ಸಿನಿಮಾ ನಿಂತು ಹೋಗಿತ್ತು.

ಅನುರಾಗ್ ಬಸು ನಿರ್ದೇಶನ

ಆದರೆ ಇದೀಗ ಸಿನಿಮಾದ ಚಿತ್ರೀಕರಣ ಮತ್ತೆ ಶುರುವಾಗಿದ್ದು, ಮುಂಬೈನಲ್ಲಿ ಶೂಟಿಂಗ್​​ನಲ್ಲಿ ಬ್ಯುಸಿ ಆಗಿದ್ದಾರೆ ನಟಿ.

  ಮುಂಬೈನಲ್ಲಿ ಶೂಟಿಂಗ್​

ಶ್ರೀಲೀಲಾ ಒಟ್ಟಿಗೆ ಮೂರು ಹಿಂದಿ ಸಿನಿಮಾ ಒಪ್ಪಿಕೊಂಡಿದ್ದರು. ಆದರೆ ಒಂದೂ ಸಹ ಈ ವರೆಗೆ ಬಿಡುಗಡೆ ಆಗಿಲ್ಲ.

   ಮೂರು ಹಿಂದಿ ಸಿನಿಮಾ

ಬಹುಷಃ ಈ ವರ್ಷದ ಅಂತ್ಯದ ವೇಳೆಗೆ ಶ್ರೀಲೀಲಾ ಅವರ ಮೊದಲ ಹಿಂದಿ ಸಿನಿಮಾ ರಿಲೀಸ್ ಆಗಬಹುದೇನೋ?

  ಮೊದಲ ಹಿಂದಿ ಸಿನಿಮಾ