ಮತ್ತೊಂದು ಬಾಲಿವುಡ್ ಬಿಗ್ ಬಜೆಟ್ ಸಿನಿಮಾಕ್ಕೆ ಶ್ರೀಲೀಲಾ ಆಯ್ಕೆ

26 AUG 2025

By  Manjunatha

ಕನ್ನಡ ಸಿನಿಮಾಗಳಿಂದ ನಟನೆ ಆರಂಭಿಸಿದ ಬೆಂಗಳೂರಿನ ಹುಡುಗಿ ಶ್ರೀಲೀಲಾ ಈಗ ಬಾಲಿವುಡ್​ನ ಹಾಟ್ ಫೇವರೇಟ್.

     ಬೆಂಗಳೂರಿನ ಹುಡುಗಿ

ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಮೆರೆದ ಶ್ರೀಲೀಲಾ ಇತ್ತೀಚೆಗೆ ಬಾಲಿವುಡ್​ಗೆ ಕಾಲಿಟ್ಟಿದ್ದು, ಅಲ್ಲಿಯೂ ಕಮಾಲ್ ಮಾಡುತ್ತಿದ್ದಾರೆ.

     ತೆಲುಗಿನ ಟಾಪ್ ನಟಿ

ತೆಲುಗಿನ ಬಹುತೇಕ ಸ್ಟಾರ್ ಹೀರೋಗಳೊಟ್ಟಿಗೂ ನಟಿಸಿ ಸೈ ಎನಿಸಿಕೊಂಡಿರುವ ಶ್ರೀಲೀಲಾ ಈಗ ಬಾಲಿವುಡ್​ ಅಂಗಳದಲ್ಲಿದ್ದಾರೆ.

  ಬಾಲಿವುಡ್​ ಅಂಗಳದಲ್ಲಿ

ಶ್ರೀಲೀಲಾ ಪ್ರಸ್ತುತ ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಮತ್ತೊಂದು ಸಿನಿಮಾಕ್ಕೆ ಆಯ್ಕೆ ಆಗಿದ್ದಾರೆ.

ಎರಡು ಬಾಲಿವುಡ್ ಸಿನಿಮಾ

ಕಾರ್ತಿಕ್ ಆರ್ಯನ್ ಜೊತೆಗೆ ‘ಆಶಿಖಿ 3’ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರೀಕರಣ ಅಂತಿಮ ಹಂತದಲ್ಲಿದೆ.

 ಕಾರ್ತಿಕ್ ಆರ್ಯನ್ ಜೊತೆ

ಅದರ ಜೊತೆಗೆ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ನಟನೆಯ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

   ಸೈಫ್ ಅಲಿ ಖಾನ್ ಪುತ್ರ

ಈ ಎರಡೂ ಸಿನಿಮಾಗಳ ಜೊತೆಗೆ ಇದೀಗ ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಯೊಂದರಿಂದ ಹೊಸ ಸಿನಿಮಾ ಆಫರ್ ಶ್ರೀಲೀಲಾಗೆ ಬಂದಿದೆ.

  ಖ್ಯಾತ ನಿರ್ಮಾಣ ಸಂಸ್ಥೆ

ಟೈಗರ್ ಶ್ರಾಫ್ ನಟಿಸಲಿರುವ ಹೊಸ ಆಕ್ಷನ್ ಸಿನಿಮಾಕ್ಕೆ ನಟಿ ಶ್ರೀಲೀಲಾ ನಾಯಕಿ ಎನ್ನಲಾಗುತ್ತಿದೆ.

    ಟೈಗರ್ ಶ್ರಾಫ್ ಜೊತೆಗೆ