ಟಾಲಿವುಡ್ ಹಿರಿಯ ನಟನಿಗೆ ನಾಯಕಿಯಾದ ‘ಕೆಜಿಎಫ್’ ಚೆಲುವೆ ಶ್ರೀನಿಧಿ

01 July 2026

By  Manjunatha

‘ಕೆಜಿಎಫ್’ ಸಿನಿಮಾ ಮೂಲಕ ನಟನೆ ಆರಂಭಿಸಿದ ನಟಿ ಶ್ರೀನಿಧಿ ಶೆಟ್ಟಿ, ಈಗ ಪರ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ.

       ನಟಿ ಶ್ರೀನಿಧಿ ಶೆಟ್ಟಿ

ಕನ್ನಡ ಸೇರಿದಂತೆ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಶ್ರೀನಿಧಿ ಶೆಟ್ಟಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

   ತೆಲುಗು ಮತ್ತು ತಮಿಳು

ಇದೀಗ ಶ್ರೀನಿಧಿ ಶೆಟ್ಟಿ ಅವರು ತೆಲುಗಿನ ಹಿರಿಯ ಸ್ಟಾರ್ ನಟನ ಹೊಸ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

      ಹಿರಿಯ ಸ್ಟಾರ್ ನಟ

ದಶಕಗಳಿಂದಲೂ ತೆಲುಗು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿರುವ ವಿಕ್ಟರಿ ವೆಂಕಟೇಶ್ ಮುಂದಿನ ಸಿನಿಮಾಕ್ಕೆ ಶ್ರೀನಿಧಿ ನಾಯಕಿ.

   ನಟ ವಿಕ್ಟರಿ ವೆಂಕಟೇಶ್

ವೆಂಕಟೇಶ್ ಅವರು ‘ಆದರ್ಶ ಕುಟುಂಬಂ: ಹೌಸ್ ನಂಬರ್ 47’ ಹೆಸರಿನ ಹಾಸ್ಯಮಯ ಕೌಟುಂಬಿಕ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

     ‘ಆದರ್ಶ ಕುಟುಂಬಂ’

ಈ ಸಿನಿಮಾಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ. ತಮ್ಮ ವಯಸ್ಸಿಗಿಂತಲೂ ತುಸು ಹಿರಿಯ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ.

    ಶ್ರೀನಿಧಿ ಶೆಟ್ಟಿ ನಾಯಕಿ

ಈ ಹಾಸ್ಯಮಯ ಕೌಟುಂಬಿಕ ಸಿನಿಮಾವನ್ನು ಟಾಲಿವುಡ್​​ನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ.

    ತ್ರಿವಿಕ್ರಮ್ ಶ್ರೀನಿವಾಸ್

ಶ್ರೀನಿಧಿ ಶೆಟ್ಟಿ, ವೆಂಕಟೇಶ್ ಅವರು ಮಕ್ಕಳೊಟ್ಟಿಗೆ ಸೋಫಾ ಮೇಲೆ ಕುಳಿತಿರುವ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ.

ಪೋಸ್ಟರ್ ಬಿಡುಗಡೆ ಆಗಿದೆ