ಎಂಟು ಕೋಟಿ ಸಂಭಾವನೆ ಕೇಳಿದ್ದರೆ ನಟಿ ಶ್ರೀನಿಧಿ ಶೆಟ್ಟಿ?

27 OCT 2026

By  Manjunatha

ಸರಳ, ಸುಂದರ ಶ್ರೀನಿಧಿ ಶೆಟ್ಟಿ, ‘ಕೆಜಿಎಫ್’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಭಾವಂತ ನಟಿ. 

      ‘ಕೆಜಿಎಫ್’ ಮೂಲಕ

ಶ್ರೀನಿಧಿ ಶೆಟ್ಟಿ ತಮ್ಮ ಪಾಡಿಗೆ ತಾವಿರುವ, ಒಪ್ಪಿಕೊಂಡ ಸಿನಿಮಾಗಳನ್ನು ಶ್ರದ್ಧೆಯಿಂದ ಮುಗಿಸಿಕೊಡುವ ನಟಿ.

  ತಮ್ಮ ಪಾಡಿಗೆ ತಾವಿರುವ

ಆದರೆ ಶ್ರೀನಿಧಿ ಶೆಟ್ಟಿ ಅವರ ಬಗ್ಗೆ ವದಂತಿಗಳು ಕೆಲವು ಈ ಹಿಂದೆ ಬಹಳ ಹರಿದಾಡಿದ್ದವು. ಆ ಬಗ್ಗೆ ನಟಿ ಮಾತನಾಡಿದ್ದಾರೆ.

     ಬಹಳ ಹರಿದಾಡಿದ್ದವು

‘ಕೆಜಿಎಫ್’ ಸಿನಿಮಾದ ಬಳಿಕ ಶ್ರೀನಿಧಿ ಶೆಟ್ಟಿ ಅವರು ಸಿನಿಮಾಕ್ಕೆ 7-8 ಕೋಟಿ ಸಂಭಾವನೆ ಕೇಳುತ್ತಾರೆ ಎಂಬ ಸುದ್ದಿ ಹಬ್ಬಿತ್ತು.

  ಶ್ರೀನಿಧಿ ಶೆಟ್ಟಿ ಸಂಭಾವನೆ

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾದ ಯಶಸ್ಸಿನಿಂದಾಗಿ ನಟಿ ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿತ್ತು.

      ದೊಡ್ಡ  ಸಂಭಾವನೆ

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿಧಿ ಶೆಟ್ಟಿ, ಅದೆಲ್ಲವೂ ಅಪ್ಪಟ ಸುಳ್ಳು ಎಂದಿದ್ದಾರೆ.

ಅಪ್ಪಟ ಸುಳ್ಳು ಎಂದಿದ್ದಾರೆ

‘ನಾನು ಸಿನಿಮಾ ಅನ್ನು ಹಣಕ್ಕಾಗಿ ಒಪ್ಪಿಕೊಳ್ಳುವುದೇ ಇಲ್ಲ. ಹಾಗಿದ್ದಿದ್ದರೆ ನಾನು ಬಹಳ ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ’ ಎಂದಿದ್ದಾರೆ.

    ಒಪ್ಪಿಕೊಳ್ಳುವುದೇ ಇಲ್ಲ

ಶ್ರೀನಿಧಿ ಶೆಟ್ಟಿ ಅವರೇ ಹೇಳಿರುವಂತೆ ಅವರು ಸಿನಿಮಾಗಳನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಾರಂತೆ.

      ಅಳೆದು ತೂಗಿ ಆಯ್ಕೆ