14  Aug 2025

Pic credit - Pintrest

Author: Akshatha Vorkady

ದರ್ಶನ್​​ ಮತ್ತೆ ಜೈಲಿಗೆ;  5 ಸ್ಟಾರ್ ಟ್ರೀಟ್ ಮೆಂಟ್​​ಗೆ ಇನ್ಮುಂದೆ ಅವಕಾಶವಿಲ್ಲ!

ನಟ ದರ್ಶನ್​ಗೆ ಬಿಗ್ ಶಾಕ್ ಎದುರಾಗಿದೆ. ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.

ದರ್ಶನ್​​ ಮತ್ತೆ ಜೈಲಿಗೆ

 ‘ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. 

ದರ್ಶನ್​​ ಮತ್ತೆ ಜೈಲಿಗೆ

ಕೊಲೆ ಕೇಸ್​​ನಲ್ಗಲಿ ಜೈಲಿಗೆ ಹೋದಾಗಲೂ ಅಪರಾಧಿಗಳ ಜೊತೆ ಸಿಗರೇಟ್ ಸೇದಿದ್ದ ದರ್ಶನ್​​​, ಈ ಫೋಟೋ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿತ್ತು. 

ಫೋಟೋ ವೈರಲ್

ನಟ ದರ್ಶನ್ ತೂಗುದೀಪ ಅವರು ಕುರ್ಚಿಯ ಮೇಲೆ ಕುಳಿತು ಒಂದು ಕೈಯಲ್ಲಿ ಮಗ್ ಹಾಗೂ ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದಿದ್ದ ಫೋಟೋ ವೈರಲ್ ಆಗಿತ್ತು.

ಕೈಯಲ್ಲಿ ಸಿಗರೇಟ್ 

ಇದೀಗಾ ಮತ್ತೆ  ದರ್ಶನ್ ಜೈಲು ಸೇರಿದ್ದು, ಇನ್ಮುಂದೆ ನಟನಿಗೆ ರಾಜಮರ್ಯಾದೆ, ರಾಜವೈಭೋಗ  5 ಸ್ಟಾರ್ ಟ್ರೀಟ್ ಮೆಂಟ್​​ಗೆ ನೀಡದಂತೆ ಕೋರ್ಟ್​ ಆದೇಶ ನೀಡಿದೆ.

ರಾಜಮರ್ಯಾದೆ

ದರ್ಶನ್ ಅವರು ಇಷ್ಟು ದಿನ ಹೊರಗೆ ಹಾಯಾಗಿ ಓಡಾಡಿಕೊಂಡಿದ್ದರು. ಆದರೆ, ಈಗ ತೊಂದರೆ ಎದುರಾಗಿದೆ. ಅವರು ಮತ್ತೆ ಜೈಲು ಸೇರು ಬೇಕಿದೆ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.

ಫ್ಯಾನ್ಸ್ ಬೇಸರ

ಪವಿತ್ರಾ ಗೌಡ, A6, ಜಗದೀಶ್ ಅಲಿಯಾಸ್ ಜಗ್ಗ, A7 ಅನುಕುಮಾರ್ ಅಲಿಯಾಸ್ ಅನು, ಎ14 ಪ್ರದೂಶ್, ಎ11  ನಾಗರಾಜು ಅಲಿಯಾಸ್ ನಾಗ, ಎ12 , ಲಕ್ಷ್ಮಣ್ ಜಾಮೀನು ಕೂಡ ರದ್ದಾಗಿದೆ.

ಜಾಮೀನು ರದ್ದು