ಐದು ವರ್ಷದ ಬಳಿಕ ಮತ್ತೆ ದಕ್ಷಿಣಕ್ಕೆ ಬಂದ ಬಾಲಿವುಡ್ ಸ್ಟಾರ್ ನಟಿ

05 Apr 2025

By  Manjunatha

ಟಬು, ಬಾಲಿವುಡ್​ನ ಸ್ಟಾರ್ ನಟಿಯರಲ್ಲಿ ಒಬ್ಬರು. ಅವರು ಯಶಸ್ಸಿಗಿಂತಲೂ ಹೆಚ್ಚು ನಟನೆಗೆ ಪ್ರಧಾನ್ಯತೆ ನೀಡಿದ ನಟಿ.

 ಬಾಲಿವುಡ್​ನ ಸ್ಟಾರ್ ನಟಿ

ಸಹನಟಿಯರಂತೆ ಕೇವಲ ಕಮರ್ಶೀಯಲ್ ಸಕ್ಸಸ್ ಹಿಂದೆ ಓಡದೆ, ನಟನೆಯಿಂದ ಹೆಜ್ಜೆ ಮೂಡಿಸುವ ಕಾರ್ಯ ಮಾಡಿ ಯಶಸ್ಸು ಕಂಡರು.

ಹೆಜ್ಜೆ ಮೂಡಿಸುವ ಕಾರ್ಯ

ಅಂದಹಾಗೆ ಟಬು ಬಹಳ ಹಿಂದೆಯೇ ಬಹುಭಾಷಾ ನಟಿ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಟಿ, ಬೆಂಗಾಲಿ, ಇಂಗ್ಲೀಷ್ ನಲ್ಲಿ ನಟಿಸಿದ್ದಾರೆ.

   ಬಹುಭಾಷಾ ನಟಿ ಟಬು

ಹೈದರಾಬಾದ್ ಮೂಲದವರಾದರ ಟಬು, ಹಲವಾರು ತೆಲುಗು, ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

    ಹೈದರಾಬಾದ್ ಮೂಲ

ಆದರೆ 2008 ರ ಬಳಿಕ ದಕ್ಷಿಣದ ಸಿನಿಮಾಗಳಲ್ಲಿ ನಟಿಸಲಿಲ್ಲ, ಬದಲಿಗೆ ಹಿಂದಿ ಸಿನಿಮಾಗಳಲ್ಲಿ ಮಾತ್ರವೇ ನಟಿಸಿದರು.

   ಹಿಂದಿ ಸಿನಿಮಾ ಮಾತ್ರ

2020 ರಲ್ಲಿ ಬಿಡುಗಡೆ ಆದ ‘ಅಲಾ ವೈಕುಂಟಪುರಂಲೋ’ ಸಿನಿಮಾನಲ್ಲಿ ತಾಯಿಯ ಪಾತ್ರದಲ್ಲಿ ಟಬು ಕಾಣಿಸಿಕೊಂಡರು.

ಅಲಾ ವೈಕುಂಟಪುರಂಲೋ

ಈಗ ಐದು ವರ್ಷದ ಬಳಿಕ ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಬರುತ್ತಿದ್ದಾರೆ. ವಿಜಯ್ ಸೇತುಪತಿ ಜೊತೆ ಟಬು ನಟಿಸಲಿದ್ದಾರೆ.

  ನಟ ವಿಜಯ್ ಸೇತುಪತಿ

ಪುರಿ ಜಗನ್ನಾಥ್ ನಿರ್ದೇಶನದ ‘ಬೆಗ್ಗರ್’ ಸಿನಿಮಾನಲ್ಲಿ ವಿಜಯ್ ಸೇತುಪತಿ ನಾಯಕ, ಈ ಸಿನಿಮಾದ ನಾಯಕಿ ಟಬು.

ಪುರಿ ಜಗನ್ನಾಥ್ ನಿರ್ದೇಶನ

ಪವರ್​ಫುಲ್ ಪಾತ್ರಗಳನ್ನು ‘ಬೆಗ್ಗರ್’ ಸಿನಿಮಾ ಹೊಂದಿರುವ ಕಾರಣ, ಪವರ್​ಫುಲ್ ನಟ-ನಟಿಯರನ್ನೇ ಆಯ್ಕೆ ಮಾಡಲಾಗಿದೆ.

   ಪವರ್​ಫುಲ್ ನಟ-ನಟಿ