ಜಾನ್ಹವಿಯನ್ನೇ ಮಂಕಾಗಿಸಿದ ಮಾಡೆಲ್ ತಮನ್ನಾ ಕಾಟೋಚ್ ಯಾರು?

02 Apr 2025

By  Manjunatha

ಜಗದ್ ವಿಖ್ಯಾತ ಲ್ಯಾಕ್ಮೆ ಫ್ಯಾಷನ್ ವೀಕ್​ನಲ್ಲಿ ಹಲವು ಭಾರತೀಯ ಸಿನಿಮಾ ನಟಿಯರು, ಮಾಡೆಲ್​ಗಳು ಭಾಗವಹಿಸಿದ್ದಾರೆ.

   ಲ್ಯಾಕ್ಮೆ ಫ್ಯಾಷನ್ ವೀಕ್​

ಕರೀನಾ ಕಪೂರ್, ಜಾನ್ಹವಿ ಕಪೂರ್ ಇನ್ನೂ ಹಲವಾರು ಮಂದಿ ಈ ಫ್ಯಾಷನ್ ಶೋನಲ್ಲಿ ಭಾಗಿಯಾಗಿ ರ್ಯಾಂಪ್​ ಮೇಲೆ ನಡೆದಿದ್ದಾರೆ.

ಬಾಲಿವುಡ್ ನಟಿಯರು ಭಾಗಿ

ಇತ್ತೀಚೆಗಷ್ಟೆ ಜಾನ್ಹವಿ ಕಪೂರ್ ಶೋ ಸ್ಟಾಪರ್ ಆಗಿ ಲ್ಯಾಕ್ಮೆ ಫ್ಯಾಷನ್ ವೀಕ್​ನಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.

  ಶೋ ಸ್ಟಾಪರ್  ಜಾನ್ಹವಿ 

ಆದರೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್​ಗಿಂತಲೂ ತಮನ್ನಾ ಕಾಟೋಚ್ ಹೆಸರಿನ ಮಾಡೆಲ್ ಒಬ್ಬರು ಹೆಚ್ಚು ಗಮನ ಸೆಳೆದಿದ್ದಾರೆ.

     ತಮನ್ನಾ ಕಾಟೋಚ್

ತಮನ್ನಾ ಕಾಟೋಚ್ ವೃತ್ತಿಪರ ಮಾಡೆಲ್ ಆಗಿದ್ದು, ಹಲವು ಅತ್ಯುತ್ತಮ ಬ್ರ್ಯಾಂಡ್​ಗಳಿಗೆ ರಾಯಭಾರಿ ಮತ್ತು ಮಾಡೆಲ್ ಆಗಿದ್ದಾರೆ.

       ವೃತ್ತಿಪರ ಮಾಡೆಲ್

ಸಪೂರ ದೇಹದ, ದಿಟ್ಟ ಲುಕ್ ಇರುವ ತಮನ್ನಾ ಕಾಟೋಚ್ ರ್ಯಾಂಪ್ ಮೇಲೆ ಅದ್ಭುತವಾಗಿ ತಮ್ಮನ್ನು ಪ್ರೆಸೆಂಟ್ ಮಾಡಿಕೊಳ್ಳುತ್ತಾರೆ.

ತಮನ್ನಾ ರ್ಯಂಪ್ ವಾಕ್

ಜಾನ್ಹವಿಯ ಭಾವ ರಹಿತ ಮುಖಕ್ಕಿಂತಲೂ ತಮನ್ನಾ ಕಾಟೋಚ್ ಫ್ಯಾಷನ್ ವೀಕ್​ನಲ್ಲಿ ಗಮನ ಸೆಳೆದಿದ್ದು, ಆಕೆಯನ್ನು ಕೊಂಡಾಡುತ್ತಿದ್ದಾರೆ.

    ಗಮನ ಸೆಳೆದ ಮಾಡೆಲ್

ದೆಹಲಿಯವರಾಗಿರುವ ತಮನ್ನಾ ಕಾಟೋಚ್ ಕಳೆದ ಕೆಲ ವರ್ಷಗಳಿಂದಲೂ ಮಾಡೆಲಿಂಗ್​ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

     ದೆಹಲಿಯ ಮಾಡೆಲ್ 

ತಮನ್ನಾ ಕಾಟೋಚ್ ಬಾಲಿವುಡ್​ಗೆ ಪದಾರ್ಪಣೆ ಮಾಡಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ, ನೋಡಬೇಕು ಏನಾಗುತ್ತದೆ ಎಂದು.

 ಬಾಲಿವುಡ್​ಗೆ ಪದಾರ್ಪಣೆ