Pic credit - Instagram

Author: Rajesh Duggumane

05 Aug 2025

ಕೊಹ್ಲಿ ಜೊತೆ ಡೇಟ್ ಮಾಡಿದ್ರಾ ತಮನ್ನಾ ಭಾಟಿಯಾ?

ತಮನ್ನಾ ಸಮಸ್ಯೆ 

ಯಾವುದೇ ಸೆಲೆಬ್ರಿಟಿ ಆದರೂ ಅವರ ಹೆಸರು ಅನೇಕರ ಜೊತೆ ತಳುಕು ಹಾಕಿಕೊಳ್ಳೋದು ಗೊತ್ತೇ ಇದೆ. ಇದಕ್ಕೆ ನಟಿ ತಮನ್ನಾ ಭಾಟಿಯಾ ಕೂಡ ಹೊರತಾಗಿ ಇಲ್ಲ ಎಂದೇ ಹೇಳಬಹುದು.

ಕೊಹ್ಲಿ ಜೊತೆ 

ತಮನ್ನಾ ಹೆಸರು ಈ ಮೊದಲು ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ಆಟಗಾರ ಅಬ್ದುಲ್ ರಜಾಕ್ ಜೊತೆ ನಂಟಾಗಿತ್ತು

ಒಂದು ಬಾರಿ ಮಾತ್ರ 

ನನಗೆ ಈ ವಿಚಾರಗಳು ಕೇಳಿದಾಗ ಬೇಸರ ಆಗುತ್ತದೆ. ನಾನು ಒಂದು ಶೂಟ್​ಗಾಗಿ ಮಾತ್ರ ವಿರಾಟ್​ ಕೊಹ್ಲಿಯನ್ನು ಭೇಟಿ ಮಾಡಿದ್ದೆ ಎಂದಿದ್ದಾರೆ ತಮನ್ನಾ. 

ಭೇಟಿ ಮಾಡಲೇ ಇಲ್ಲ 

’ನಂತರ ಅವರನ್ನು ಭೇಟಿ ಆಗಲೇ ಇಲ್ಲ. ನಾನು ಅವರ ಜೊತೆ ಮಾತನ್ನೂ ಆಡಿಲ್ಲ, ಭೇಟಿಯನ್ನೂ ಮಾಡಿಲ್ಲ’ ಎಂದು ಹೇಳಿದರು.

ಅಬ್ದುಲ್ ರಜಾಕ್ ಜೊತೆ 

ಪಾಕಿಸ್ತಾನದ ಅಬ್ದುಲ್ ರಜಾಕ್ ವಿಚಾರದಲ್ಲಿಯೂ ತಮನ್ನಾ ಸುದ್ದಿ ಆಗಿದ್ದರು. ಇಬ್ಬರೂ ಜ್ಯುವೆಲರಿ ಸ್ಟೋರ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಈಗಲೇ ಮದುವೆ ಆಗಿದೆ

‘ಮಜಾಕ್ ಮಜಾಕ್ ಅಬ್ದುಲ್ ರಜಾಕ್’ ಎಂದರು ತಮನ್ನಾ. ‘ಇಂಟರ್​ನೆಟ್ ಫನ್ ಪ್ಲೇಸ್. ಅವರ ಪ್ರಕಾರ ನಾನು ಈಗಾಗಲೇ ಅಬ್ದುಲ್ ರಜಾಕ್​ನ ಮದುವೆ ಆಗಿದ್ದೇನೆ’ ಎಂದರು ತಮನ್ನಾ.

ತಮನ್ನಾ ಬೇಸರ 

‘ಕನೆಕ್ಷನ್ ಇಲ್ಲದೆ ಇರುವಾಗ ಜನರು ಈ ರೀತಿ ಹೇಳಿದಾಗ ಮುಜುಗರ ಆಗುತ್ತದೆ. ಜನರು ಇನ್ನೂ ಈ ರೀತಿಯ ವಿಚಾರ ಕ್ರಿಯೆಟ್ ಮಾಡುತ್ತಾರೆ’ ಎಂದರು ತಮನ್ನಾ.