ಹಾಲಿವುಡ್​ಗೆ ಹಾರಲಿದ್ದಾರೆಯೇ ನಟಿ ತಮನ್ನಾ ಭಾಟಿಯಾ?

10 May 2025

By  Manjunatha

ತಮನ್ನಾ ಭಾಟಿಯಾ ಎರಡು ದಶಕಗಳಿಂದಲೂ ಭಾರತೀಯ ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

   ನಟಿ ತಮನ್ನಾ ಭಾಟಿಯಾ

ಕಳೆದ 20 ವರ್ಷಗಳಿಂದಲೂ ನಟಿಸುತ್ತಿರುವ ತಮನ್ನಾ ಭಾಟಿಯಾ, ಈಗಲೂ ಬೇಡಿಕೆ ಉಳಿಸಿಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ.

ಬೇಡಿಕೆ ಉಳಿಸಿಕೊಂಡಿದ್ದಾರೆ

ಇತ್ತೀಚೆಗೆ ತಮನ್ನಾ ಭಾಟಿಯಾಗೆ ಐಟಂ ಹಾಡುಗಳ ಆಫರ್ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಬಲು ಬೇಡಿಕೆ ಇದೆ ನಟಿಗೆ.

  ಐಟಂ ಹಾಡುಗಳ ಆಫರ್

ಅಲ್ಲಲ್ಲಿ ಕೆಲವು ಒಳ್ಳೆಯ ಸಿನಿಮಾ ಆಫರ್​ಗಳು ಸಹ ಬರುತ್ತಿವೆ. ಇದೀಗ ಸ್ಟಾರ್ ನಟರ ಸಿನಿಮಾ ಒಂದರಲ್ಲಿ ತಮನ್ನಾ ನಟಿಸಲಿದ್ದಾರೆ.

     ಸ್ಟಾರ್ ನಟರ ಸಿನಿಮಾ

ಹೊಸ ಸುದ್ದಿಯೊಂದರ ಪ್ರಕಾರ, ನಟಿ ತಮನ್ನಾ ಹಾಲಿವುಡ್​ಗೆ ಹಾರಲಿದ್ದಾರಂತೆ. ಪ್ರಾಜೆಕ್ಟ್ ಒಂದರಲ್ಲಿ ಅವರಿಗೆ ಅವಕಾಶ ದೊರೆತಿದೆಯಂತೆ.

ಹಾಲಿವುಡ್​ಗೆ ಹಾರಲಿದ್ದಾರೆ

ಹಾಲಿವುಡ್​ನ ಟಿವಿ ಸೀರೀಸ್ ಒಂದರಲ್ಲಿ ಅಮೆರಿಕನ್-ಇಂಡಿಯನ್ ಪಾತ್ರವೊಂದರಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

 ಅಮೆರಿಕನ್-ಇಂಡಿಯನ್

ರೊಮ್ಯಾಂಟಿಕ್ ಥ್ರಿಲ್ಲರ್ ಕತೆಯುಳ್ಳ ಟಿವಿ ಸೀರೀಸ್ ಒಂದರಲ್ಲಿ ತಮನ್ನಾ ಭಾಟಿಯಾಗೂ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ.

     ಒಳ್ಳೆಯ ಪಾತ್ರ ಸಿಕ್ಕಿದೆ

ತಮನ್ನಾ ಭಾಟಿಯಾ ಪ್ರಸ್ತುತ ‘ವಿವಾ’ ಹಾಗೂ ‘ರೇಂಜರ್’ ಹೆಸರಿನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕೈಯಲ್ಲಿರುವ ಸಿನಿಮಾಗಳು