ಸ್ಟಾರ್ ನಟ ನನ್ನೆದುರು ಕೆಟ್ಟದಾಗಿ ನಡೆದುಕೊಂಡಿದ್ದ: ತಮನ್ನಾ ಭಾಟಿಯಾ

07 AUG 2025

By  Manjunatha

ತಮನ್ನಾ ಭಾಟಿಯಾ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಈಗಲೂ ಸಹ ಬೇಡಿಕೆಯಲ್ಲಿರುವ ನಟಿ.

      ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಚಿತ್ರರಂಗಕ್ಕೆ ಬಂದು 20 ವರ್ಷಗಳಾಗಿವೆ. ಈಗಲೂ ನಾಯಕಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

       20 ವರ್ಷಗಳಾಗಿವೆ

ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುತ್ತಾ, ದಕ್ಷಿಣದ ಸ್ಟಾರ್ ನಟನೊಬ್ಬ ನನ್ನೆದುರು ಕೆಟ್ಟದಾಗಿ ವರ್ತಿಸಿದ್ದ ಎಂದಿದ್ದಾರೆ.

     ದಕ್ಷಿಣದ ಸ್ಟಾರ್ ನಟ

ದಕ್ಷಿಣದ ಸಿನಿಮಾ ಒಂದರ ಚಿತ್ರೀಕರಣದಲ್ಲಿ ತಮನ್ನಾ ಭಾಟಿಯಾ ನಟಿಸುವಾಗ ಒಂದು ದೃಶ್ಯದಲ್ಲಿ ನಟಿಸುವುದಿಲ್ಲ ಎಂದಿದ್ದರಂತೆ.

      ಸಿನಿಮಾ ಚಿತ್ರೀಕರಣ

ಆ ದೃಶ್ಯದಲ್ಲಿ ನಟಿಸುವುದು ನನಗೆ ಸರಿ ಬರಲಿಲ್ಲ ಹಾಗಾಗಿ ಆ ದೃಶ್ಯದಲ್ಲಿ ನಾನು ನಟಿಸುವುದಿಲ್ಲ ಎಂದರಂತೆ.

ನಟಿಸುವುದಿಲ್ಲ ಎಂದರಂತೆ

ಆಗ ಅಲ್ಲಿಯೇ ಇದ್ದ ದಕ್ಷಿಣದ ಸ್ಟಾರ್ ನಟನೊಬ್ಬ ಸಿಟ್ಟಿನಿಂದ ಈಕೆಯನ್ನು ಹೊರಗೆ ಕಳಿಸಿ ನಾಯಕಿ ಬದಲಾಯಿಸಿ ಎಂದರಂತೆ.

   ‘ನಾಯಕಿ ಬದಲಾಯಿಸಿ’

ಆದರೆ ತಮನ್ನಾ ಯಾವುದೇ ಪ್ರತಿಕ್ರಿಯೆ ನೀಡದೆ ಸರಿ ಎಂದು ಸುಮ್ಮನಾದರಂತೆ. ಆದರೆ ಮಾರನೇಯ ದಿನ ಆ ನಟ ಕ್ಷಮೆ ಕೇಳಿದರಂತೆ.

  ಕ್ಷಮೆ ಕೇಳಿದ ಸ್ಟಾರ್ ನಟ

ನೀವು ನಿಮಗೆ ಸರಿ ಎನಿಸಿದ್ದು ಮಾಡಿ ಬೇರೆಯವರು ಹೇಗೆ ವರ್ತಿಸುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ ತಮನ್ನಾ.

ತಮನ್ನಾ ಭಾಟಿಯಾ ಸಲಹೆ