10 ನಿಮಿಷ ಹಾಡಿಗೆ ನಾಯಕಿಯರಿಗಿಂತಲೂ ಹೆಚ್ಚು ಸಂಭಾವನೆ ಪಡೆವ ತಮನ್ನಾ

11 Apr 2025

By  Manjunatha

ತಮನ್ನಾ ಭಾಟಿಯಾ ಒಂದು ಕಾಲದ ಬಲು ಬೇಡಿಕೆಯ ನಾಯಕ ನಟಿ. ಅವರ ಅಂದಕ್ಕೆ ಫಿದಾ ಆಗದವರು ಕಡಿಮೆ.

 ನಟಿ ತಮನ್ನಾ ಭಾಟಿಯಾ

ಎರಡು ದಶಕದಿಂದಲೂ ಚಿತ್ರರಂಗದಲ್ಲಿರುವ ತಮನ್ನಾ ಭಾಟಿಯಾ ಹಲವು ಭಾಷೆಗಳ ಬ್ಲಾಕ್ ಬಸ್ಟರ್​ಗಳನ್ನು ನೀಡಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ತಮನ್ನಾ ಭಾಟಿಯಾಗೆ ಈಗಲೂ ಬೇಡಿಕೆ ಇದೆ. ಆದರೆ ಈಗ ಭಿನ್ನ ರೀತಿಯ ಪಾತ್ರಗಳು ನಟಿಯನ್ನು ಅರಸಿ ಬರುತ್ತಿವೆ.

      ಭಿನ್ನ ರೀತಿಯ ಪಾತ್ರ

ಅದಕ್ಕೂ ಮುಖ್ಯವಾಗಿ ತಮನ್ನಾ ಭಾಟಿಯಾ ಇತ್ತೀಚೆಗೆ ನಾಯಕಿಯಾಗಿ ನಟಿಸುವುದಕ್ಕಿಂತಲೂ ಐಟಂ ಹಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

      ಐಟಂ ಹಾಡುಗಳಲ್ಲಿ

ಐಟಂ ಹಾಡುಗಳಲ್ಲಿ ಸೊಂಟ ಕುಣಿಸಲು ನಾಯಕಿಯರು ಪಡೆಯುವುದಕ್ಕಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ.

       ಹೆಚ್ಚಿನ ಸಂಭಾವನೆ

ಅಜಯ್ ದೇವಗನ್, ರಿತೇಶ್ ದೇಶ್​ಮುಖ್ ನಟನೆಯ ‘ರೈಡ್ 2’ ಸಿನಿಮಾನಲ್ಲಿ ತಮನ್ನಾ ಭಾಟಿಯಾ ಐಟಂ ಹಾಡಿನಲ್ಲಿ ನಟಿಸಿದ್ದಾರೆ.

    ‘ರೈಡ್ 2’ ಸಿನಿಮಾನಲ್ಲಿ

ಈ ಸಿನಿಮಾದ ಒಂದು ಹಾಡಿಗೆ ತಮನ್ನಾ ಭಾಟಿಯಾ 1.50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

 ಸಂಭಾವನೆ ಎಷ್ಟು ಕೋಟಿ

ಹಲವಾರು ನಾಯಕ ನಟಿಯರು ಒಂದು ಇಡೀ ಸಿನಿಮಾಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುವುದಿಲ್ಲ.

       ದೊಡ್ಡ  ಸಂಭಾವನೆ