ಹಾಲಿವುಡ್​ಗೆ ಹಾರಲಿದ್ದಾರೆಯೇ ನಟಿ ತಮನ್ನಾ ಭಾಟಿಯಾ?

09 NOV 2025

By  Manjunatha

ಭಾರತದ ಸಿನಿಮಾ ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಇತ್ತೀಚೆಗೆ ಮಾಮೂಲಾಗಿಬಿಟ್ಟಿದೆ.

 ಹಾಲಿವುಡ್ ಸಿನಿಮಾಗಳಲ್ಲಿ

ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಆಲಿಯಾ ಭಟ್ ಇನ್ನೂ ಕೆಲ ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಭಾರತೀಯ ನಟಿಯರು

ಇತ್ತೀಚೆಗಷ್ಟೆ ನಟಿ ದಿಶಾ ಪಟಾನಿ ಸಹ ಹಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು, ಆ ಬಗ್ಗೆ ನಿರೀಕ್ಷೆ ಇರಿಸಿಕೊಂಡಿದ್ದಾರೆ.

      ಹಾಲಿವುಡ್ ಚಿತ್ರರಂಗ

ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಹಾಲಿವುಡ್​​ಗೆ ಹಾರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 ನಟಿ ತಮನ್ನಾ ಭಾಟಿಯಾ

ಇತ್ತೀಚೆಗೆ ತಮ್ಮ ನಟನೆಗಿಂತಲೂ ಗ್ಲಾಮರ್​​ನಿಂದ ಹೆಚ್ಚಾಗಿ ಸೆಳೆಯುತ್ತಿರುವ ತಮನ್ನಾ ಭಾಟಿಯಾಗೆ ಹಾಲಿವುಡ್​​ನಿಂದ ಬುಲಾವ್ ಬಂದಿದೆಯಂತೆ.

ಹಾಲಿವುಡ್​​ನಿಂದ ಬುಲಾವ್

ತಮನ್ನಾ ಭಾಟಿಯಾ ಹೊಸ ಹಾಲಿವುಡ್ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲೂ ಗ್ಲಾಮರಸ್ ಪಾತ್ರವೇ ಅಂತೆ.

       ಗ್ಲಾಮರಸ್ ಪಾತ್ರವೇ

ಖ್ಯಾತ ಹಾಲಿವುಡ್ ಸ್ಟುಡಿಯೋದ ಆಕ್ಷನ್ ಸರಣಿ ಸಿನಿಮಾ ಒಂದರಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದಾರಂತೆ.

     ಆಕ್ಷನ್ ಸರಣಿ ಸಿನಿಮಾ

ಈ ಬಗ್ಗೆ ತಮನ್ನಾ ಭಾಟಿಯಾ ಈ ವರೆಗೆ ಅಧಿಕೃತವಾಗಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ. ಸುದ್ದಿ ನಿಜವಾಗಲೆಂಬುದು ಅವರ ಅಭಿಮಾನಿಗಳ ಆಶಯ.

ಮಾಹಿತಿ ಹಂಚಿಕೊಂಡಿಲ್ಲ