ಕಿಯಾರಾ ಪತಿಯ ಸಿನಿಮಾನಲ್ಲಿ ತಮನ್ನಾ ಭಾಟಿಯಾಗೇನು ಕೆಲಸ

26 Apr 2025

By  Manjunatha

ತಮನ್ನಾ ಭಾಟಿಯಾ ಒಂದು ಕಾಲದ ಸ್ಟಾರ್ ನಟಿ, ಈಗಲೂ ಇವರಿಗೆ ಬೇಡಿಕೆ ಇದೆ, ಆದರೆ ಗ್ಲಾಮರಸ್ ಪಾತ್ರ, ಹಾಡುಗಳಿಗಷ್ಟೆ.

ಒಂದು ಕಾಲದ ಸ್ಟಾರ್ ನಟಿ

ಇತ್ತೀಚೆಗೆ ತಮನ್ನಾ ಭಾಟಿಯಾ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು, ಇಲ್ಲದೇ ಹೋದರೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ.

ಐಟಂ ಹಾಡುಗಳಲ್ಲಿ ಹೆಚ್ಚು

ಪೂರ್ಣ ಪ್ರಮಾಣದ ನಾಯಕಿಯ ಪಾತ್ರದ ಅವಕಾಶಗಳು ತಮನ್ನಾ ಭಾಟಿಯಾಗಿ ಬಹುತೇಕ ಕಡಿಮೆ ಆಗಿವೆ.

    ನಾಯಕಿ ಪಾತ್ರ ಕಡಿಮೆ

ಆದರೆ ಇತ್ತೀಚೆಗೆ ತಮನ್ನಾ ಭಾಟಿಯಾಗೆ ಒಂದೊಳ್ಳೆ ಅವಕಾಶ ಬಂದೊದಗಿದೆ. ಸ್ಟಾರ್ ನಟನ ಸಿನಿಮಾದಲ್ಲಿ ಪ್ರಮುಖ ಪಾತ್ರ ದೊರೆತಿದೆ.

     ಸ್ಟಾರ್ ನಟನ ಸಿನಿಮಾ

ಕಿಯಾರಾ ಅಡ್ವಾಣಿ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂದಿನ ಸಿನಿಮಾನಲ್ಲಿ ತಮನ್ನಾ ಭಾಟಿಯಾ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ.

   ಕಿಯಾರಾ ಅಡ್ವಾಣಿ ಪತಿ

ಏಕ್ತಾ ಕಪೂರ್ ನಿರ್ಮಿಸಿ ಟಿವಿಎಫ್​ನ ದೀಪಕ್ ಮಿಶ್ರಾ ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾನಲ್ಲಿ ಸಿದ್ಧಾರ್ಥ್ ನಾಯಕ, ತಮನ್ನಾ ನಾಯಕಿ.

 ಏಕ್ತಾ ಕಪೂರ್ ನಿರ್ಮಾಣ

ಈ ಇಬ್ಬರ ಮುಂದಿನ ಸಿನಿಮಾ ಪಕ್ಕಾ ಹಾರರ್ ಥ್ರಿಲ್ಲರ್ ಸಿನಿಮಾ ಆಗಿರಲಿದೆಯಂತೆ. ತಮನ್ನಾಗೆ ಬಹಳ ಒಳ್ಳೆಯ ಪಾತ್ರವೇ ಇದೆಯಂತೆ.

  ಹಾರರ್ ಥ್ರಿಲ್ಲರ್ ಸಿನಿಮಾ

ತಮನ್ನಾ ಪ್ರಸ್ತುತ ‘ನೋ ಎಂಟ್ರಿ 2’, ‘ರೇಂಜರ್’, ರಾಕೇಶ್ ಮಯಿರಾ ಅವರ ಬಯೋಪಿಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಹಲವು ಸಿನಿಮಾ ಕೈಯಲ್ಲಿ