‘ಟಾಕ್ಸಿಕ್’ನಲ್ಲಿ ಲೇಡೀಸ್ vs ಯಶ್: ಇಲ್ಲಿವೆ ನೋಡಿ ಚಿತ್ರಗಳು

01 July 2026

By  Manjunatha

‘ಟಾಕ್ಸಿಕ್’ ಸಿನಿಮಾದ ಹೊಸ ಟೀಸರ್ ಒಂದು ಇಂದು (ಜುಲೈ 1) ಬಿಡುಗಡೆ ಆಗಿದೆ.

‘ಟಾಕ್ಸಿಕ್’ ಸಿನಿಮಾ ಟೀಸರ್

ಇಂದು ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಸಿನಿಮಾದ ಎಲ್ಲ ನಾಯಕಿಯರ ಪಾತ್ರದ ಕಿರು ಪರಿಚಯವನ್ನು ಮಾಡಿಕೊಡಲಾಗಿದೆ.

ನಾಯಕಿಯ ಕಿರು ಪರಿಚಯ

ಟೀಸರ್​​ನಲ್ಲಿ ನಟಿ ನಯತಾರಾ ಮೊದಲ ಕಾಣುತ್ತಾರೆ, ಬೆಂಕಿಯ ನಡುವೆ ಬುಲೆಟ್ ಓಡಿಸಿಕೊಂಡು ಹೋಗುತ್ತಾರೆ ನಯನತಾರಾ.

     ನಯನತಾರಾ ಪಾತ್ರ

ಬಳಿಕ ಕಿಯಾರಾ ಅಡ್ವಾಣಿ ಬಲು ಸುಂದರವಾಗಿ ಕಾಣುತ್ತಾರೆ. ಸರ್ಕಸ್​​ನಲ್ಲಿ ದೊಡ್ಡ ನೀರಿನ ಬೌಲ್ ಒಳಗಿಂದ ಎದ್ದು ಬರುವುದನ್ನು ತೋರಿಸಲಾಗಿದೆ.

 ಕಿಯಾರಾ ಬಲು ಸುಂದರ

ರುಕ್ಮಿಣಿ ವಸಂತ್ ಮೆಲಿಸಾ ಹೆಸರಿನ ಪಾತ್ರದಲ್ಲಿ ನಟಿಸಿದ್ದು, ಬಂದೂಕು ಹಿಡಿದು ಸಖತ್ ಖಡಕ್ ಆಗಿ ಟೀಸರ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

   ರುಕ್ಮಿಣಿ ವಸಂತ್ ಪವರ್​​

ನಟಿ ತಾರಾ ಸುತಾರಿಯಾ ಸಿಗರೇಟು ಸೇದುತ್ತಾ, ಯಾರಿಗೋ ಹೊಂಚು ಹಾಕಿ ಕಾಯುತ್ತಿರುವಂತೆ ಕಾಣಿಸಿಕೊಂಡಿದ್ದಾರೆ.

  ನಟಿ ತಾರಾ ಸುತಾರಿಯಾ

ನಟಿ ಹುಮಾ ಖುರೇಷಿ ಎಲಿಜಬೆತ್ ಹೆಸರಿನ ಪಾತ್ರದಲ್ಲಿ ನಟಿಸಿದ್ದು, ತಂತ್ರ-ಕುತಂತ್ರಗಳನ್ನು ಮಾಡುತ್ತಿರುವಂತೆ ಅವರನ್ನು ತೋರಿಸಲಾಗಿದೆ.

   ಹುಮಾ ಖುರೇಷಿ ಪಾತ್ರ?

ಇನ್ನು ನಟ ಯಶ್ ಸಹ ಟೀಸರ್​​ನಲ್ಲಿದ್ದು, ತಮ್ಮ ಮೇಲೆ ದಾಳಿಗೆ ಬಂದ ಮಹಿಳೆಯರ ವಿರುದ್ಧ ಫೈಟ್ ಮಾಡುತ್ತಿದ್ದಾರೆ.

     ಯಶ್ ಪಾತ್ರ ಹೇಗಿದೆ?