ಸ್ಟಾರ್ ನಟನೊಟ್ಟಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟ ನಟಿ ತೃಪ್ತಿ ದಿಮ್ರಿ

23 NOV 2025

By  Manjunatha

ತೃಪ್ತಿ ದಿಮ್ರಿ, ಬಾಲಿವುಡ್​​ನ ಸ್ಟಾರ್ ನಟಿಯರಲ್ಲಿ ಒಬ್ಬರು. ಇವರನ್ನು ಅದೃಷ್ಟದ ನಟಿ ಎಂದೂ ಎನ್ನುತ್ತಾರೆ.

  ಬಾಲಿವುಡ್​​ನ ಸ್ಟಾರ್ ನಟಿ

‘ಅನಿಮಲ್’ ಸಿನಿಮಾದ ಒಂದು ಅತಿಥಿ ಪಾತ್ರದಿಂದಾಗಿ ತೃಪ್ತಿ ದಿಮ್ರಿಯ ಜೀವನವೇ ಬದಲಾಗಿ ಹೋಯ್ತು.

      ಒಂದು ಅತಿಥಿ ಪಾತ್ರ

ಇದೇ ಕಾರಣಕ್ಕೆ ತೃಪ್ತಿ ದಿಮ್ರಿಯನ್ನು ಅದೃಷ್ಟದ ನಟಿ ಎಂದು ಸಹ ಕರೆಯಲಾಗುತ್ತದೆ. ಇದೀಗ ಮತ್ತೊಂದು ಅದೃಷ್ಟ ನಟಿಯ ಕೈ ಹಿಡಿದಿದೆ.

ಅದೃಷ್ಟದ ನಟಿ ತೃಪ್ತಿ ದಿಮ್ರಿ

ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದು, ಇದರ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಬೇಕಿತ್ತು.

    ಸಂದೀಪ್ ರೆಡ್ಡಿ ವಂಗಾ

ಆದರೆ ದೀಪಿಕಾ ಪಡುಕೋಣೆ, ಕೆಲಸದ ಅವಧಿ ಇನ್ನಿತರೆ ನಿಯಮಗಳನ್ನು ಹಾಕಿದ್ದರಿಂದ ದೀಪಿಕಾರನ್ನು ಕೈಬಿಡಲಾಯ್ತು.

      ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಸಿನಿಮಾದಿಂದ ಹೊರ ಹೋದ ಕಾರಣಕ್ಕೆ ಆ ಅವಕಾಶವನ್ನು ಸಂದೀಪ್ ಅವರು ತೃಪ್ತಿಗೆ ನೀಡಿದ್ದಾರೆ.

     ತೃಪ್ತಿಗೆ ಸಿಕ್ತು ಅವಕಾಶ

ಇಲ್ಲಿಯೂ ಸಹ ತೃಪ್ತಿ ದಿಮ್ರಿಯ ಅದೃಷ್ಟ ಕೆಲಸ ಮಾಡಿದೆ. ದೀಪಿಕಾ ಕೈತಪ್ಪಿದ ಪಾತ್ರ ನೇರವಾಗಿ ತೃಪ್ತಿ ಕೈಸೇರಿದೆ.

  ತೃಪ್ತಿ ದಿಮ್ರಿಯ ಅದೃಷ್ಟ

ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತೃಪ್ತಿ ದಿಮ್ರಿ ದಕ್ಷಿಣದಲ್ಲೂ ಒಳ್ಳೆಯ ಹೆಸರು ಮಾಡುತ್ತಾರಾ ನೋಡಬೇಕಿದೆ.

ದಕ್ಷಿಣದಲ್ಲೂ ಒಳ್ಳೆ ಹೆಸರು