ಮತ್ತೊಂದು ತೆಲುಗು ಸಿನಿಮಾನಲ್ಲಿ ತೃಪ್ತಿ ದಿಮ್ರಿ ನಾಯಕಿ?

15 APRL 2026

By  Manjunatha

‘ಅನಿಮಲ್’ ಸಿನಿಮಾದ ಸಣ್ಣ ಪಾತ್ರದಿಂದ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ ನಟಿ ತೃಪ್ತಿ ದಿಮ್ರಿ.

        ನಟಿ ತೃಪ್ತಿ ದಿಮ್ರಿ

ತೃಪ್ತಿ ದಿಮ್ರಿ, ಇದೀಗ ಒಂದರ ಹಿಂದೊಂದು ದೊಡ್ಡ ಬಜೆಟ್​​ನ, ಸ್ಟಾರ್ ನಟರುಗಳೊಡನೆ ನಟಿಸುತ್ತಿದ್ದಾರೆ.

   ಸ್ಟಾರ್ ನಟರುಗಳೊಡನೆ

ದೀಪಿಕಾ ಪಡುಕೋಣೆ ನಿರಾಕರಿಸಿದ ತೆಲುಗಿನ ‘ಸ್ಪಿರಿಟ್’ ಸಿನಿಮಾಕ್ಕೆ ಪ್ರಭಾಸ್ ಎದುರು ತೃಪ್ತಿ ನಾಯಕಿ.

 ಸ್ಪಿರಿಟ್’ ಸಿನಿಮಾ ನಾಯಕಿ

ಪ್ರಭಾಸ್ ಜೊತೆಗೆ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣವನ್ನು ಇತ್ತೀಚೆಗಷ್ಟೆ ನಟಿ ತೃಪ್ತಿ ದಿಮ್ರಿ ಪ್ರಾರಂಭಿಸಿದ್ದಾರೆ.

    ಸಿನಿಮಾದ ಚಿತ್ರೀಕರಣ

ಆದರೆ ಅಷ್ಟರಲ್ಲಾಗಲೇ ನಟಿ ತೃಪ್ತಿ ದಿಮ್ರಿಗೆ ಟಾಲಿವುಡ್​​ನಿಂದ ಮತ್ತೊಂದು ದೊಡ್ಡ ಆಫರ್ ಬಂದಿದೆ ಎನ್ನಲಾಗುತ್ತಿದೆ.

  ಟಾಲಿವುಡ್​​ನಿಂದ ಆಫರ್

ತೃಪ್ತಿ ದಿಮ್ರಿಗೆ ತೆಲುಗು ಚಿತ್ರರಂಗದ ಮತ್ತೊಂದು ಪ್ರಮುಖ ಸಿನಿಮಾನಲ್ಲಿ ಆಫರ್ ನೀಡಲಾಗಿದೆಯಂತೆ.

ತೆಲುಗಿನ ಪ್ರಮುಖ ಸಿನಿಮಾ

ಅಲ್ಲು ಅರ್ಜುನ್ ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾನಲ್ಲಿ ತೃಪ್ತಿ ದಿಮ್ರಿಗೆ ಅವಕಾಶ ದೊರೆತಿದೆ ಎನ್ನಲಾಗುತ್ತಿದೆ.

 ಅಲ್ಲು ಅರ್ಜುನ್ ಜೊತೆಗೆ?

ಈ ವಿಷಯವನ್ನು ಚಿತ್ರತಂಡವಾಗಲಿ, ನಟಿ ತೃಪ್ತಿ ದಿಮ್ರಿ ಆಗಲಿ ಇನ್ನೂ ಖಾತ್ರಿ ಪಡಿಸಿಲ್ಲ.

   ಇನ್ನೂ ಖಾತ್ರಿ ಪಡಿಸಿಲ್ಲ