‘ಸ್ಪಿರಿಟ್’ ಶುರುವಾಗುವ ಮೊದಲೇ ತೃಪ್ತಿಗೆ ಮತ್ತೊಂದು ತೆಲುಗು ಸಿನಿಮಾ ಅವಕಾಶ

10 OCT 2025

By  Manjunatha

ತೃಪ್ತಿ ದಿಮ್ರಿ ಬಾಲಿವುಡ್​ನ ಹಾಟ್ ಯುವನಟಿ, ‘ಅನಿಮಲ್’ ಸಿನಿಮಾದಿಂದ ಅವರ ಅದೃಷ್ಟವೇ ಬದಲಾಗಿದೆ.

      ‘ಅನಿಮಲ್’ ಸಿನಿಮಾ

‘ಅನಿಮಲ್’ ಸಿನಿಮಾನಲ್ಲಿ ಸಣ್ಣ ಪಾತ್ರ ತೃಪ್ತಿ ದಿಮ್ರಿ ಮಾಡಿದ್ದರು. ಆ ಪಾತ್ರ ಭಾರಿ ಹಿಟ್ ಆಗಿ. ತೃಪ್ತಿಗೆ ಅದೃಷ್ಟ ಖುಲಾಯಿಸಿತು.

   ಸಣ್ಣ ಪಾತ್ರ ತೃಪ್ತಿ ದಿಮ್ರಿ

ಇದೀಗ ತೃಪ್ತಿ ದಿಮ್ರಿ ಪ್ರಭಾಸ್ ಜೊತೆಗೆ ‘ಸ್ಪಿರಿಟ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಕ್ಕೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶಕ.

     ‘ಸ್ಪಿರಿಟ್’ ಸಿನಿಮಾನಲ್ಲಿ

‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ನವೆಂಬರ್ ತಿಂಗಳಲ್ಲಿ ಪ್ರಾರಂಭ ಆಗಲಿದೆ. ಆದರೆ ಅದಕ್ಕೆ ಮುಂಚೆಯೇ ತೃಪ್ತಿಗೆ ಮತ್ತೊಂದು ತೆಲುಗು ಸಿನಿಮಾ ಆಫರ್ ಸಿಕ್ಕಿದೆ.

   ತೆಲುಗು ಸಿನಿಮಾ ಆಫರ್

ತೃಪ್ತಿ ದಿಮ್ರಿ ಇದೀಗ ಮತ್ತೊಬ್ಬ ತೆಲುಗಿನ ಸ್ಟಾರ್ ಹೀರೋ ನಟನೆಯ ಸಿನಿಮಾನಲ್ಲಿ ನಾಯಕಿ ಆಗಲಿದ್ದಾರೆ.

   ತೆಲುಗಿನ ಸ್ಟಾರ್ ಹೀರೋ

ಅಕ್ಕಿನೇನಿ ಅಖಿಲ್ ನಟಿಸಲಿರುವ ಹೊಸ ಲವ್ ಸ್ಟೋರಿ ಸಿನಿಮಾನಲ್ಲಿ ತೃಪ್ತಿ ದಿಮ್ರಿ ನಾಯಕಿಯಂತೆ.

ತೃಪ್ತಿ ದಿಮ್ರಿ ನಾಯಕಿಯಂತೆ

ಅಖಿಲ್ ಈಗಾಗಲೇ ‘ಲೆನಿನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಹೊಸ ಸಿನಿಮಾ ಪ್ರಾರಂಭಿಸಲಿದ್ದಾರೆ.

  ಶೀಘ್ರವೇ ಹೊಸ ಸಿನಿಮಾ

ಇನ್ನು ತೃಪ್ತಿ ದಿಮ್ರಿ ಕೈಯಲ್ಲಿ ‘ಸ್ಪಿರಿಟ್’ ಜೊತೆಗೆ ಕೆಲ ಹಿಂದಿ ಸಿನಿಮಾಗಳು ಸಹ ಇವೆ. ತೃಪ್ತಿ ದಕ್ಷಿಣದಲ್ಲಿ ಮಿಂಚುತ್ತಾರಾ ಕಾದು ನೋಡಬೇಕಿದೆ.

   ಕೆಲ ಹಿಂದಿ ಸಿನಿಮಾಗಳು